ಕೋವಿಡ್ ಭೀತಿ: ವಿದೇಶದಿಂದ ಬಂದ 119 ಪ್ರಯಾಣಿಕರ ಪೈಕಿ ನಾಲ್ವರಿಗೆ ಕೊರೋನಾ ಪಾಸಿಟಿವ್. ಬೆಂಗಳೂರು,ಡಿಸೆಂಬರ್,27,2022(..):ಚೀನಾ ಸೇರಿ ಹಲವು ದೇಶಗಳಲ್ಲಿ ಕೋವಿಡ್ ಮತ್ತೆ ಉಲ್ಬಣವಾಗುತ್ತಿದ್ದು ಈ ಮಧ್ಯೆ ಭಾರತಕ್ಕೂ ಕೊರೋನಾ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರ್ಕಾರ ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ನಡೆಸುತ್ತಿದೆ. ನಿನ್ನೆ ವಿದೇಶದಿಂದ ಬಂದ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ವಿದೇಶದಿಂದ ಬಂದ 119 ಪ್ರಯಾಣಿಕರಿಗೆ ಕೊರೋನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಾಲ್ವರನ್ನ ಐಸೋಲೇಷನ್ ಮಾಡಲಾಗಿದೆ. ವಿದೇಶದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ 16ಕ್ಕೆ ಏರಿಕೆಯಾಗಿದೆ. : 119 –- – .