ಬೈಕ್ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವು. ಬೆಂಗಳೂರು,ಡಿಸೆಂಬರ್,27,2022(..):ಬೈಕ್ ಅಪಘಾತ ಸಂಭವಿಸಿ ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸ್ಯಾಂಕಿ ಕೆರೆ ಟಿ. ಚೌಡಯ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ನಾಯ್ಕ್ ಮೃತಪಟ್ಟ ಹೆಲ್ತ್ ಇನ್ಸ್ ಪೆಕ್ಟರ್. ಪುಟ್ ಪಾತ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪ್ರಶಾಂತ್ ನಾಯ್ಕ್ ಜೆಪಿ ನಗರ ನಿವಾಸಿಯಾಗಿದ್ದು, ಸದಾಶಿವನಗರದಿಂದ ಜೆಪಿ ನಗರಕ್ಕೆ ತೆರಳುವಾಗ ಘಟನೆ ನಡೆದಿದೆ. ಈ ಕುರಿತು ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - -.