ಕ್ವಾರಿಯಲ್ಲಿ ಕಲ್ಲು ಕುಸಿದು ದುರಂತ: ಮೂವರು ದುರ್ಮರಣ…! ಚಾಮರಾಜನಗರ,ಡಿಸೆಂಬರ್,26,2022(..):ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆದ ಅಚಾನಕ್ ಘಟನೆಯಿಂದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಬಿಸಲವಾಡಿ ಗ್ರಾಮದಲ್ಲಿ ನಡೆಯುತ್ತಿರುವ ಕ್ಚಾರಿಯೊಂದರಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಬಂಧಿಸಿದ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಿಸಲವಾಡಿ ಗ್ರಾಮದಲ್ಲಿರುವ ಭಾಸ್ಕರ್ ಎಂಬುವವರ ಕ್ವಾರೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕ್ವಾರೆಯಲ್ಲಿ ಕೆಲಸ ಮಾಡುತ್ತಿರುವಾಗ ಸಡಿಲವಾದ್ದರಿಂದ ಕಲ್ಲು ಕುಸಿದು ಈ ಘಟನೆ ನಡೆದಿದೆ. ಬಂಡೆಯ ಮೇಲುಗಡೆ ನಿಂತು ಕುಳಿ ತೆಗೆಯುವಾಗ ಈ ಘಟನೆ ಸಂಭವಿಸಿದ್ದು ಮೃತರು ಹೊರರಾಜ್ಯದವರೊ ಅಥವಾ ಸ್ಥಳೀಯರೊ ಎಂಬುದನ್ನ ಇಲಾಖೆ ಖಾತ್ರಿಪಡಿಸಬೇಕಾಗಿದೆ. : -- -