ರಾಕಿ ಭಾಯ್ ಮುಂದಿನ ಸಿನಿಮಾ ಗುಟ್ಟು ಬಹಿರಂಗ! ಬರ್ತ್ ಡೇ ದಿನ ಹೊಸ ಸಿನಿಮಾ ಹೆಸರು ರಿವೀಲ್ ಬೆಂಗಳೂರು, ಡಿಸೆಂಬರ್ 25, 2022 (..):‘ಕೆಜಿಎಫ್ ರಾಕಿ ಭಾಯ್’ ಬರ್ತ್‌ ಡೇಗೆ ಹೊಸ ಸಿನಿಮಾ ಅನೌನ್ಸ್‌ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಫಿಲಂ ಕ್ಯಾಂಪನಿಯನ್‌ ನಡೆಸಿದ ಸಂದರ್ಶನದಲ್ಲಿ ರಾಕಿ ಈ ವಿಚಾರ ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿ ಜರ್ನಿ ಕುರಿತು ಯಶ್‌ ಮಾತನಾಡುವಾಗ ವೇಳೆ ತಮ್ಮ ಮುಂದಿನ ಸಿನಿಮಾ ಕುರಿತು ಮಾತನಾಡಿದ್ದಾರೆ. ಎಲ್ಲರೂ ನನ್ನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಅಂದುಕೊಂಡಿದ್ದಾರೆ. ಅಭಿಮಾನಿಗಳ ಆಸೆ ಈಡೇರಿಸುವುದು ನನ್ನ ಭಾಗ್ಯ ಎಂದು ತಿಳಿಸಿದ್ದಾರೆ. ಭಾರತೀಯ ಸಿನಿ ರಂಗದ ಕುರಿತು ಮಾತನಾಡಿದ ಯಶ್‌, ಬಾಲಿವುಡ್‌ನ್ನು ಯಾವುದೇ ಕಾರಣಕ್ಕೂ ಗೇಲಿ ಮಾಡಬಾರದು. ಅವರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದಿದ್ದಾರೆ. ಹಾಲಿವುಡ್‌ ಸಿನಿಮಾ ಮಾಡುವುದು ನನ್ನ ಗುರಿಯಲ್ಲ, ಭಾರತದತ್ತ ಎಲ್ಲರೂ ತಿರುಗಿ ನೋಡುವಂತಹ ಸಿನಿಮಾ ಮಾಡ್ಬೇಕು ಎಂದು ಯಶ್ ಹೇಳಿದ್ದಾರೆ.