ಬೈಕ್ ಗಳ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು. ಯಾದಗಿರಿ,ಡಿಸೆಂಬರ್,26,2022(..):ಬೈಕ್ ಗಳ ಮಧ್ಯೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಕಕ್ಕೇರಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬಾಲಪ್ಪ, ಜಟ್ಟೆಪ್ಪ, ಪರಸಪ್ಪ ಮೃತಪಟ್ಟವರು. ಕೋಟೆಗುಡ್ಡ ಗ್ರಾಮದ ಬಾಲಪ್ಪ, ಜಟ್ಟಪ್ಪ ಇಬ್ಬರು ಕುರುಗಾಹಿಗಳು. ಕೊಡೆಕಲ್ ಗ್ರಾಮದ ಪರಸಪ್ಪ ತರಕಾರಿ ವ್ಯಾಪಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : --- – .