ವೋಟರ್ ಐಡಿ ಅಕ್ರಮ ಪ್ರಕರಣ: ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಾಪಸ್. ಬೆಂಗಳೂರು,ಡಿಸೆಂಬರ್,24,2022(..):ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ಆದೇಶವನ್ನ ಸರ್ಕಾರ ವಾಪಸ್ ಪಡೆದಿದೆ. ವೊಟರ್ ಐಡಿ ಅಕ್ರಮಪ್ರಕರಣದಲ್ಲಿ ಬೆಂಗಳೂರು ನಗರ ಮಾಜಿ ಡಿಸಿ ಕೆ. ಶ್ರೀನಿವಾಸ್, ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅಮಾನತಾಗಿದ್ದರು. ಇದೀಗ ಈ ಇಬ್ಬರು ಅಮಾನತನ್ನ ಸರ್ಕಾರ ವಾಪಸ್ ಪಡೆದಿದ್ದು, ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. : - - – - -