ವಿಧಾನಪರಿಷತ್ ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ. ಬೆಳಗಾವಿ,ಡಿಸೆಂಬರ್,23,2022(..):ವಿಧಾನಪರಿಷತ್ಉಪಸಭಾಪತಿಯಾಗಿ ಬಿಜೆಪಿ ಸದಸ್ಯ ಎಂ.ಕೆಪ್ರಾಣೇಶ್ಆಯ್ಕೆಯಾಗಿದ್ದಾರೆ. ಇಂದು ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಿತು. ಎಂ,ಕೆ ಪ್ರಾಣೇಶ್ 39 ಮತ ಪಡೆಯುವ ಮೂಲಕ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಅರವಿಂದ ಅರಳಿ 26 ಮತ ಪಡೆದರು. ಜೆಡಿಎಸ್ ಯಾರೊಬ್ಬರೂ ಕೂಡ ಮತ ಚಲಾಯಿಸದೆ ತಟಸ್ಥವಾಗಿದ್ದರು. ಸದನದಲ್ಲಿ 39 ಬಿಜೆಪಿ ಸದಸ್ಯರು, 26 ಕಾಂಗ್ರೆಸ್ ಸದಸ್ಯರು, 8 ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. : – – – .