ಮಾಜಿ ಸಚಿವರ ಫಾರ್ಮ್ ಹೌಸ್ ಮೇಲೆ ದಾಳಿ: ವನ್ಯಜೀವಿಗಳು ಅರಣ್ಯಾಧಿಕಾರಿಗಳ ವಶಕ್ಕೆ. ದಾವಣಗೆರೆ,ಡಿಸೆಂಬರ್,22,2022(..):ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವನ್ಯಜೀವಿಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಬಾಗದಲ್ಲಿರುವ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದರು. ಈ ವೇಳೆ 7 ಚುಕ್ಕೆ ಜಿಂಕೆ, 10 ಕೃಷ್ಣಮೃಗ, 7 ಕಾಡು ಹಂದಿ 3 ಮುಂಗಿಸಿ ಹಾಗೂ ಎರಡು ನರಿಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಅಧಿಕಾರಿಳು ವನ್ಯಜೀವಿಗಳನ್ನ ವಶಕ್ಕೆ ಪಡೆದಿದ್ದಾರೆ. : – - - – .