ಪಂಚಮಸಾಲಿಗೆ 2ಎ ಮೀಸಲಾತಿ ಕೊಡದಿದ್ದರೇ ನಾಳೆ ಸುವರ್ಣಸೌಧಕ್ಕೆ ಮುತ್ತಿಗೆ- ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಬೆಳಗಾವಿ,ಡಿಸೆಂಬರ್,21,2022(..):ಪಂಚಮಸಾಲಿ ಸಮುದಾಯಕ್ಕೆ ನಾಳೆ 2ಎ ಮೀಸಲಾತಿ ಘೋಷಿಸದಿದ್ದರೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗೆ 2ಎ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದ್ದೇವೆ. ನಾಳೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ನಾಳೆ ಬೆಳಗಾವಿಯಲ್ಲಿ ವಿರಾಟ್ ಪಂಚಶಕ್ತಿ ಹೆಸರಲ್ಲಿ ಸಮಾವೇಶ ಮಾಡುತ್ತೇವೆ. ಸಮಾವೇಶದಲ್ಲಿ 25 ಲಕ್ಷ ಜನರು ಸೇರಲಿದ್ದಾರೆ. ಮೀಸಲಾತಿ ಕೊಟ್ಟರೇ ಸಿಎಂ ಗೆ ಸನ್ಮಾನ ಮಾಡುತ್ತೇವೆ ಇಲ್ಲದಿದ್ದರೇ ಸುವರ್ಣಸೌಧದ ಬಳಿ ಹೋರಾಟ, ಮುತ್ತಿಗೆ ಹಾಕುತ್ತೇವೆ ಎಂದರು. : 2A - - – - .