ಮೈಲಾಕ್ ನಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಸ್ವಚ್ಛತಾ ಯಂತ್ರ ಕೊಡುಗೆ: ನಾಳೆ ಸ್ವೀಕಾರ ಕಾರ್ಯಕ್ರಮ. ಮೈಸೂರು,ಡಿಸೆಂಬರ್,21,2022(..):ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಸಂಸ್ಥೆಯು ನಗರದ ಮೇಟಗಳ್ಳಿಯಲ್ಲಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸ್ವಚ್ಛತಾ ಯಂತ್ರ ಕೊಡುಗೆಯಾಗಿ ನೀಡುತ್ತಿದೆ. ಸಿ.ಎಸ್.ಆರ್. ಅನುದಾನದಡಿಯಲ್ಲಿ ರೂ. 5.00 ಲಕ್ಷ ಮೌಲ್ಯದ ’ ಎಂಬ ಯಂತ್ರವನ್ನು ಮೈಲಾಕ್ ಸಂಸ್ಥೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಕೊಡುಗೆಯಾಗಿ ನೀಡುತ್ತಿದೆ. ಯಂತ್ರವನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಮಂಜುನಾಥ್ ಅವರು ನಾಳೆ ಮಧ್ಯಾಹ್ನ 12-00 ಕ್ಕೆ ಆಸ್ಪತ್ರೆಯ ಆವರಣದಲ್ಲಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ಅಧ್ಯಕ್ಷರಾದ ಆರ್. ರಘು (ಕೌಟಿಲ್ಯ), ವ್ಯವಸ್ಥಾಪಕ ನಿರ್ದೇಶಕರಾದ ಕುಮಾರಸ್ವಾಮಿ ಜಿ, ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಹಾಜರಿರುತ್ತಾರೆ. : - - –