ಕಾಂಗ್ರೆಸ್ ಗೆ ಕುಕ್ಕರ್ ಬಾಂಬ್ ಮೇಲೆ ಪ್ರೀತಿ, ಸಿಬಿಐ ಸಂಸ್ಥೆ ಮೇಲೆ ದ್ವೇಷವಿದೆ- ಸಿ.ಟಿ ರವಿ ವ್ಯಂಗ್ಯ. ಬೆಂಗಳೂರು,ಡಿಸೆಂಬರ್,20,2022(..):ಕಾಂಗ್ರೆಸ್ ಗೆ ಕುಕ್ಕರ್ ಬಾಂಬ್ ಮೇಲೆ ಪ್ರೀತಿ ಇದೆ. ಸಿಬಿಐ ಸಂಸ್ಥೆ ಮೇಲೆ ದ್ವೇಷವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಲೇವಡಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಸಿ.ಟಿ ರವಿ, ಭ್ರಷ್ಟಾಚಾರ ಮಾಡದಿದ್ದರೇ ಕಾಂಗ್ರೆಸ್ ಯಾಕೆ ಹೆದರಬೇಕು…? ಸಿಬಿಐ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಭ್ರಷ್ಟಾಚಾರ ಆಗಿದ್ದರೇ ತನಿಖೆ ಮಾಡುತ್ತಾರೆ. ಸಿಬಿಐ ಬಗ್ಗೆ ಕಾಂಗ್ರೆಸ್ ಗೆ ಯಾಕೆ ಭಯ. ಎಲ್ಲ ಸರಿ ಇದ್ದರೇ ಡಿ.ಕೆ ಶಿವಕುಮಾರ್ ಗೆ ಭಯವೇಕೆ..? ಎಂದು ಪ್ರಶ್ನಿಸಿದರು. : –- – -