ಪಂಚಮಸಾಲಿಗೆ 2ಎ ಮೀಸಲಾತಿ ವಿಚಾರ: ಹಿಂದುಳಿದ ಆಯೋಗದ ವರದಿ ಆಧರಿಸಿ ಕ್ರಮ- ಸಿಎಂ ಬೊಮ್ಮಾಯಿ. ಬೆಳಗಾವಿ,ಡಿಸೆಂಬರ್,20,2022(..):ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹಿಂದುಳಿದ ಆಯೋಗದ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರ ಹಿಂದುಳಿದ ಆಯೋಗಕ್ಕೆ ಸೂಚನೆ ನೀಡಿದೆ. ವರದಿ ಮಂಡನೆಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು. ಡಿಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್ ಮೇಲಿರುವ ಕೇಸ್ ಗಳ ಆಧಾರದ ಮೇಲೆ ಸಿಬಿಐ ಕ್ರಮ ಕೈಗೊಳ್ಳುತ್ತಿದೆ . ಸಿಬಿಐ ಮುಂದೆ ಯಾವ ಕೇಸ್ ಇದೆ ಅನ್ನೋದು ಗೊತ್ತು. ಸಿಬಿಐ ಅನ್ನೋದು ಸಂವಿಧಾನಿಕ ಸಂಸ್ಥೆ ಎಂದರು. : 2A - - - -.