ಸಿಬಿಐ ದಾಳಿಯಾಗಿದ್ದಕ್ಕೆ ಪದೇ ಪದೇ ಬಿಜೆಪಿ ಮೇಲೆ ಟೀಕೆ: ಡಿಕೆಶಿ ಆರೋಪ ಸರಿಯಲ್ಲ- ಸಚಿವ ಆರ್.ಅಶೋಕ್. ಬೆಳಗಾವಿ,ಡಿಸೆಂಬರ್,20,2022(..):ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ಎಂದು ಆರೋಪಕ್ಕೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಡಿ.ಕೆ ಶಿವಕುಮಾರ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಹಿಂದೆ ಜನಾರ್ಧನ ರೆಡ್ಡಿ ಮೇಲೆ ದಾಳಿಯಾಗಿತ್ತು ಆಗ ಯಾರ ಪ್ರೇರಣೆಯಿಂದ ಸಿಬಿಐ ದಾಳಿಯಾಗಿತ್ತು..? ಎಂದು ಪ್ರಶ್ನಿಸಿದರು. ಸಿಬಿಐ ದಾಳಿಯಾಗಿದ್ದಕ್ಕೆ ಪದೇ ಪದೇ ಬಿಜೆಪಿ ಮೇಲೆ ಟೀಕೆ ಮಾಡುತ್ತಿದ್ದಾರೆ. ಸಿಬಿಐ ಸ್ವತಂತ್ರ ಸಂಸ್ಥೆ ಡಿಕೆ ಶಿವಕುಮಾರ್ ಆರೋಪ ಸರಿಯಲ್ಲ ಎಂದು ಕಿಡಿಕಾರಿದರು. : -- – - -. .