ಪ್ರಧಾನಿ ಮೋದಿ ಬಗ್ಗೆ ಬಿಲಾವಲ್ ಭುಟ್ಟೋ ಹೇಳಿಕೆ : ಪಾಕ್ ಸರ್ಕಾರದ ನೀಚ ಮನಸ್ಥಿತಿ ಪ್ರತಿಬಿಂಬಿಸಿದೆ- ಮಾಜಿ ಸಿಎಂ ಬಿಎಸ್ ವೈ ಆಕ್ರೋಶ. ಬೆಂಗಳೂರು,ಡಿಸೆಂಬರ್,17,2022(..):ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ವಿರುದ್ಧ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದ್ದು,ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಕಿಡಿಕಾರಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಬಿಲಾವಲ್ ಭುಟ್ಟೋ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಬಿಎಸ್ ವೈ, ಬಿಲಾವಲ್ ಭುಟ್ಟೋ ಹೇಳಿಕೆಗೆ ಖಂಡನೆ ವ್ಯಕ್ತಪಡಿಸುತ್ತೇನೆ. ಪ್ರಧಾನಿ ಮೋದಿ ಬಗ್ಗೆ ಟೀಕೆ ಕೀಳು ಮನಸ್ಥಿತಿ ಬಯಲು ಮಾಡಿದೆ. ಬಿಲಾವಲ್ ಬೀಟ್ಟೋ ಕೀಳು ಮನಸ್ಥಿತಿ ಬಯಲು ಮಾಡಿದೆ. ಇದು ಪಾಕ್ ಸರ್ಕಾರದ ನೀಚ ಮನಸ್ಥಿತಿಯನ್ನ ಪ್ರತಿಬಿಂಬಿಸಿದೆ ನಾಯಿಬಾಲ ಡೊಂಕು ಎಂಬ ಪ್ರವೃತ್ತಿಯನ್ನ ಸಾಬೀತು ಪಡಿಸುತ್ತೆ ಎಂದು ಹರಿಹಾಯ್ದಿದ್ದಾರೆ. ಒಸಮಾ ಬಿಲ್ ಲಾಡನ್ ಎಲ್ಲಿ ಅಡಗಿ ಕುಳಿತಿದ್ದ. ಉಗ್ರನನ್ನ ಪೋಷಿಸುತ್ತಿರುವವರು ಯಾರೆಂದು ಇಡೀ ಜಗತ್ತಿಗೆ ಗೊತ್ತಿದೆ. ಉಗ್ರ ಸಂಘಟನೆ ತವರು ಪಾಕಿಸ್ತಾನ. ಮೋದಿಯಂತ ವಿಶ್ವನಾಯಕನ ಬಗ್ಗೆ ಟೀಕೆ ಮಾಡಿದರೇ ವಿಶ್ವದ ಕಣ್ಣಿನಲ್ಲಿ ದೊಡ್ಡ ವ್ಯಕ್ತಿಯಾಗುತ್ತೇನೆಂದು ಭಾವಿಸಿದಂತಿದೆ. ಕೀಳುಯ ಮಟ್ಟದ ಇಬ್ಬಗೆತನದ ಹೇಳಿಕೆ ಭಾರತಕ್ಕೆ ಮಾಡಿದ ಅಪಮಾನ. ದೇಶಪ್ರೇಮಿ ಭಾರತೀಯರು ಇದರ ವಿರುದ್ಧ ಹೋರಾಡಲೇಬೇಕು ಎಂದು ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರನ್ನ ಬಿಲಾವಲ್ಲ ಭುಟ್ಟೋ ಜಾಗತಿಕ ಉಗ್ರನಿಗೆ ಹೋಲಿಸಿ ಮೋದಿ ಅವರನ್ನು ಗುಜರಾತ್ ನ ಕಟುಕ ಎಂದು ಟೀಕಿಸಿದ್ದರು. : - - –- -