2023ಕ್ಕೆ ಕಾಂಗ್ರೆಸ್ ಮುಕ್ತ ಕರ್ನಾಟಕ: ಜೆಡಿಎಸ್ 15 ಸೀಟ್ ಬಂದ್ರೆ ಎಲ್ಲಾದ್ರೂ ತೂರಿಕೊಳ್ತಾರೆ- ಸಚಿವ ಆರ್.ಅಶೋಕ್. ಮಂಡ್ಯ,ಡಿಸೆಂಬರ್,16,2022(..):2023ರಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ. ಜೆಡಿಎಸ್ 15 ಸೀಟ್ ಬಂದರೇ ಎಲ್ಲಾದ್ರೂ ತೂರಿಕೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು. ಪಾಂಡವಪುರದಲ್ಲಿ ನಡೆದ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ಜೆಡಿಎಸ್ ಮೈಶುಗರ್ ಕಾರ್ಖಾನೆಗೆ ಬೀಗ ಹಾಕಿದ್ರು. ಆದರೆ ಮೈಶುಗರ್ ಕಾರ್ಖಾನೆ ಆರಂಭಿಸಿದ್ದು ಬಿಜೆಪಿ. ಮಂಡ್ಯದ 7 ಕ್ಷೇತ್ರಗಳಲ್ಲಿ ಉತ್ತಮ ನಾಯಕರಿದ್ದಾರೆ. ಈಗಲೇ ಕಾಂಗ್ರೆಸ್ ಗೆ ಭಯ ಶುರುವಾಗಿದೆ. ಮೋದಿ ಶಾ ಬಂದ ಮೇಲೆ ಆಟ ನಡೆಯಲ್ಲ. ಸ್ವತಃ ಮಲ್ಲಿಕಾರ್ಜುನ ಖರ್ಗೆ ತಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ನಮ್ಮದೇ ಆಟ ಎಂದರು. ಸುಮಲತಾ ವಿರುದ್ದ ಮಣ್ಣು ಮುಕ್ಕಿದರು. ಜೆಡಿಎಸ್ 15 ಸೀಟ್ ಗೆದ್ರೆ ಎಲ್ಲಾದ್ರೂ ತೂರಿಕೊಳ್ತಾರೆ ಕನಸಲ್ಲೂ ಜೆಡಿಎಸ್ 15 ಸೀಟ್ ಗೆಲ್ಲಲ್ಲ. 2023ಕ್ಕೆ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ. ಯಾರ್ಯಾರು ಟಿಪ್ಪು ಮುಟ್ಟಿದ್ದಾರೆ ಅವರೆಲ್ಲರೂ ಸರ್ವನಾಶವಾಗಿದ್ದಾರೆ. ಈಗ ಕಾಂಗ್ರಸ್ ಸಹ ಸರ್ವನಾಶವಾಗುತ್ತದೆ ಎಂದು ಭವಿಷ್ಯ ನುಡಿದರು. : - - – 2023- -. .