ಬಿಜೆಪಿಗೆ ಬರಲು 22 ಶಾಸಕರು ಸಿದ್ಧ- ಸಚಿವ ಮುನಿರತ್ನ ಹೊಸಬಾಂಬ್ ಬೆಂಗಳೂರು,ಡಿಸೆಂಬರ್,15,2022(..):ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದ, ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಈ ಮಧ್ಯೆ ತೋಟಗಾರಿಕೆ ಸಚಿವ ಮುನಿರತ್ನ, ಬಿಜೆಪಿಗೆ ಬರಲು 22 ಶಾಸಕರು ಸಿದ್ಧರಿದ್ದಾರೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ಬರಲು 22 ಶಾಸಕರು ಸಿದ್ದರಿದ್ದಾರೆ. ಅದರಲ್ಲಿ 10 ಶಾಸಕರನ್ನ ಆಯ್ಕೆ ಮಾಡಿಕೊಳ್ಳುತ್ತೀವಿ. ನಮ್ಮ ಹಳೆಯ ಮಿತ್ರ 10 ಶಾಸಕರನ್ನ ಕರೆತರುತ್ತಿದ್ದಾರೆ. 10 ಕಾಂಗ್ರೆಸ್ ಶಾಶಕರ ಟೀಮ್ ಬಿಜೆಪಿಗೆ ಬರುತ್ತಿದೆ ಎಂದು ಹೇಳಿದ್ದಾರೆ. : 22 – - –- -.