ಇಂದು ಸಂಜೆ ಅಮಿತ್ ಶಾ ಭೇಟಿ ಮಾಡಿ ಗಡಿ ವಿವಾದದ ಬಗ್ಗೆ ನಮ್ಮ ನಿಲುವು ತಿಳಿಸುತ್ತೇನೆ- ಸಿಎಂ ಬೊಮ್ಮಾಯಿ. ಬೆಂಗಳೂರು,ಡಿಸೆಂಬರ್,14,2022(..):ಇಂದು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಿ ಮಹಾರಾಷ್ಟ್ರ –ಕರ್ನಾಟಕ ಗಡಿ ವಿವಾದದ ಬಗ್ಗೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ, ಸಂಜೆ 7ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆಯಲ್ಲಿ ಭಾಗಿಯಾಗುವೆ. ಗಡಿ ಸಂಬಂಧ ನಮ್ಮ ನಿಲುವನ್ನ ಅಮಿತ್ ಶಾಗೆ ತಿಳಿಸುತ್ತೇವೆ. ಅವಕಾಶ ಸಿಕ್ಕರೇ ಸಚಿವ ಸಂಪುಟದ ಬಗ್ಗೆಯೂ ಪ್ರಸ್ತಾಪಿಸುವೆ ಎಂದರು. 6 ದಶಕಗಳಿಂದ ಗಡಿ ವಿಚಾರವನ್ನ ಮಹಾರಾಷ್ಟ್ರ ರಾಜಕೀಯಕ್ಕೆ ಬಳಸುತ್ತಿದೆ. ನಾವು ಹಾಗಲ್ಲ ನಮಗೆ ನೆಲ ಜಲ ಮುಖ್ಯ ಎಂದರು. ಒಳಮೀಸಲಾತಿ ಉಪಸಮಿತಿ ರಚನೆ ಕಣ್ಣೊರೆಸುವ ತಂತ್ರ ಎಂದ ವಿಪಕ್ಷ ನಾಯಕ ಸಿದ‍್ಧರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯಗೆ 5 ವರ್ಷ ವರದಿ ನೋಡುವ ಧೈರ್ಯ ಇರಲಿಲ್ಲ ದೀಪ ಹಚ್ಚಿ ಮಾತಾಡಿ ಬಂದವರ ಬಗ್ಗೆ ನಾನು ಮಾತನಾಡಲ್ಲ. ನಾವು ಪ್ರಮುಖ ವಿಚಾರಗಳಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದೇವೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಿ ಎಂದು ನೋಡಿಕೊಳ್ಳಿ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು. : - – - – –- .