ಒಳಮೀಸಲಾತಿಗೆ ಸಂಪುಟ ಉಪಸಮಿತಿ ರಚನೆ ಕೇವಲ ಕಣ್ಣೊರೆಸುವ ತಂತ್ರ- ಸಿದ್ಧರಾಮಯ್ಯ ಟೀಕೆ. ಬೆಂಗಳೂರು,ಡಿಸೆಂಬರ್,14,2022(..):ಒಳ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟವನ್ನ ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕರ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿದ್ದು ಈ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಉಪಸಮಿತಿ ರಚನೆ ಕೇವಲ ಕಣ್ಣೊರೆಸುವ ತಂತ್ರ. ಸದಾಶಿವ ಆಯೋಗ ವರದಿ ಮಂಡನೆಯಾಗಿಲ್ಲ. ಅಸೆಂಬ್ಲಿಯಲ್ಲಿ ವರದಿ ಚರ್ಚೆಯೂ ಆಗಿಲ್ಲ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಕೇಳವ ಕಣ್ಣೊರೆಸುವ ತಂತ್ರ ಬೇಡ ಎಂದು ಹೇಳಿದ್ದಾರೆ. : – - - – –