ಚಾಮರಾಜನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದು ಸಿಎಂ ಬೊಮ್ಮಾಯಿ-ಹೊಗಳಿದ ಸಚಿವ ವಿ.ಸೋಮಣ್ಣ. ಚಾಮರಾಜನಗರ,ಡಿಸೆಂಬರ್,13,2022(..):ಸಂಕಲ್ಪ ಮಾಡಿದಂತೆ ಸಿಎಂ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಗೆ ಬಂದಿದ್ದಾರೆ. ಚಾಮರಾಜನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದು ಸಿಎಂ ಬೊಮ್ಮಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೊಗಳಿದರು. ಹನೂರಿನಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ನಾನು ನನ್ನ ರಾಜಕೀಯ ಜೀವನದಲ್ಲಿ ಇಂತಹ ಸಿಎಂ ನೋಡಿಲ್ಲ. ಸಂಕಲ್ಪ ಮಾಡಿದಂತೆ ಚಾಮರಾಜನಗರ ಜಿಲ್ಲೆಗೆ ಸಿಎಂ ಬೊಮ್ಮಾಯಿ ಬಂದಿದ್ದಾರೆ . ಮಳೆ ಆತಂಕ ಇದ್ದರೂ ಮೈಸೂರು ಮೂಲಕ ಚಾಮರಾಜನಗರಕ್ಕೆ ಬಂದರು .ಇದು ಬೊಮ್ಮಾಯಿ ಅವರಿಗೆ ಸಾಮಾನ್ಯ ಜನರ ಮೇಲಿನ ಕಾಳಜಿ ತೋರಿಸುತ್ತೆ. ಒಮ್ಮೆ ಸಂಕಲ್ಪ ಮಾಡಿದ ಮೇಲೆ ಯಾವುದೇ ಕಾರಣಕ್ಖೂ ಬದಲಾಯಿಸಲ್ಲ ಎಂದರು. ಸಿಎಂ ಬೊಮ್ಮಾಯಿ ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿದ್ದಾರೆ. ಚಾಮರಾಜನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದು ಸಿಎಂ ಬೊಮ್ಮಾಯಿ. ಬಿಎಸ್ ವೈ, ಡಿವಿಎಸ್, ಶೆಟ್ಟರ್ ಅವಧಿಯಲ್ಲೂ ಚಾಮರಾಜನಗರ ಅಭಿವೃದ್ದಿಯಾಗಿದೆ . ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂಬುದು ನಮ್ಮ ಆಶಯ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. : - . –- -