ಸಿದ್ಧರಾಮಯ್ಯ ಸರ್ಕಾರದ ವೇಳೆ ಬರೀ ಬರಗಾಲವಿತ್ತು: ಈಗ ರಾಜ್ಯ ಸುಭೀಕ್ಷ- ಸಚಿವ ಆರ್.ಅಶೋಕ್. ತುಮಕೂರು,ಡಿಸೆಂಬರ್,10,2022(..):ಸಿದ್ಧರಾಮಯ್ಯ ಸರ್ಕಾರ ಇದ್ದಾಗ ಬರೀ ಬರಗಾಲವಿತ್ತು. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಸುಭೀಕ್ಷವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ಧಾರೆ. ತುಮಕೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಹಿಂದೆಂದೂ ಸುರಿಯದ ಮಳೆ ಬಂದು ಕೆರೆ ಕಟ್ಟೆ ತುಂಬಿದೆ. ಕೇವಲ ಮಳೆಯಿಂದ ಕೆರೆಗಳು ಮಾತ್ರ ತುಂಬಿದ್ದಲ್ಲ ರಾಜ್ಯ ಖಜಾನೆ ಕೂಡ ತುಂಬಿದೆ. ನಮ್ಮ ಅಂದಾಜು ಮೀರಿ ಖಜಾನೆ ತುಂಬಿದೆ . ಬಜೆಟ್ ನಲ್ಲಿ ಹಲವು ಜನಪರ ಯೋಜನೆ ಘೋಷಣೆ ಮಾಡುತ್ತೇವೆ ಎಂದರು. : - - - - -- . .