ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ: 2 ವರ್ಷದ ಮಗು ಸೇರಿ ಮೂವರು ಸಾವು. ಉಡುಪಿ,ಡಿಸೆಂಬರ್ ,10,2022(..):ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿಯಾಗಿ 2 ವರ್ಷದ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಕಾರ್ಕಾಳ ತಾಲ್ಲೂಕಿನ ನೆಲ್ಲಿಕಾರು ಬಳಿ ಈ ಘಟನೆ ನಡೆದಿದೆ. ನಾಗರಾಜು(40), ಪ್ರತ್ಯುಷಾ(32) ಎರಡು ವರ್ಷದ ಮಗು ಮೃತಪಟ್ಟವರು. ಧರ್ಮಸ್ಥಳದಿಂದ ಶೃಂಗೇರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : -- – - -