ಹಗರಣ ಬಿಚ್ಚಿಡುತ್ತೇನೆ ಎಂದ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿಕೆ ತಿರುಗೇಟು ಮಂಡ್ಯ,ಆಗಸ್ಟ್, 7,2024 (..):ಕುಮಾರಸ್ವಾಮಿ ವಿರುದ್ದದ ಹಗರಣಗಳನ್ನ ಬಿಚ್ಚಿಡುತ್ತೇನೆ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂದು ಬಿಜೆಪಿ ಜೆಡಿಎಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಅವರದು ಏನೇನಿದೆಯೋ ಬಿಚ್ಕೊಂಡು ನಿಂತ್ಕೊಳಿ ಏನು ತೊಂದರೆ ಇಲ್ಲ. ಕೊಚ್ಚೆಗಳ ಬಗ್ಗೆ ಮಾತಾಡಬಾರದು ಅಂತ ಜನರು ಸಲಹೆ ಕೊಡುತ್ತಾರೆ. ನಾನು ಮಾತನಾಡಬಾರದು ಅಂತಿದ್ದೆ. ನಿನ್ನೆ ಹೇಳಿಕೆ ಕುರಿತು ಒಂದು ವಿಡಿಯೋ ಪ್ಲೇ ಮಾಡಿದ್ದಾರೆ. ಅದಕ್ಕೆ ನಾನು ಸಿಡಿ ಶಿವು ಅಂತ ಹೇಳಿದ್ದು. ಎಲ್ಲೋಗುತ್ತೆ ವಿಡಿಯೋ ಬಿಡುವ ಚಾಳಿ ಎಂದು ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಈ ಒಂದು ಹಗರಣಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಬೇಕಲ್ಲ. ಜನರಿಗೆ ರಾಜ್ಯದಲ್ಲಿ ಏನೇನು ನಡೆದಿದೆ ಸರ್ಕಾರದ ಆಸ್ತಿಗಳನ್ನ ಯಾವ ರೀತಿ ಲಪಟಾಯಿಸಿದ್ದಾರೆ ಆ ಒಂದು ವಿಷಯಗಳನ್ನು ಜನತೆಗೆ ತಿಳಿಸುವುದು ನಮ್ಮ ಜವಾಬ್ದಾರಿ. ಹಿಂದುಳಿದ ನಾಯಕರೇ ಹಿಂದುಳಿದವರ ಹೆಸರಿನಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು. : , , ,