ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡಿನ ಜಲಾಶಯಗಳ ನೀರಿನ ಮಟ್ಟ ಮಲೆನಾಡಿನ ಭಾಗದಲ್ಲಿರುವ ಪ್ರಮುಖ ಮೂರು ಜಲಾಶಯಗಳಾದ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ ನೋಡಿ.. ಶಿವಮೊಗ್ಗ (ಆ.12):ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿರುವ ಪ್ರಮುಖ ಮೂರು ಜಲಾಶಯಗಳು ಪೂರ್ಣವಾಗಿ ಭರ್ತಿಯಾಗಿವೆ. ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ ನೋಡಿ.. ಲಿಂಗನಮಕ್ಕಿ ಜಲಾಶಯಗರಿಷ್ಠ ಮಟ್ಟ : 1819 ಅಡಿಇಂದಿನ ನೀರಿನ ಮಟ್ಟ : 1816.65 ಅಡಿಒಳಹರಿವು : 7713 ಕ್ಯೂಸೆಕ್ಹೊರ ಹರಿವು : 7610 ಕ್ಯೂಸೆಕ್ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ: 151 ಟಿಎಂಸಿಇಂದಿನ ನೀರು ಸಂಗ್ರಹಣೆ: 143.74 ಟಿಎಂಸಿಬೆಂಗಳೂರು ಹೆಚ್‌ಎಂಟಿ ಸಂಸ್ಥೆ ಬಳಿಯಿದ್ದ 469 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಸಚಿವ ಈಶ್ವರ ಖಂಡ್ರೆ ಆದೇಶ ಭದ್ರಾ ಜಲಾಶಯಗರಿಷ್ಠ ಮಟ್ಟ : 186 ಅಡಿಇಂದಿನ ನೀರಿನ ಮಟ್ಟ : 180.3 ಅಡಿಒಳಹರಿವು : 7683 ಕ್ಯೂಸೆಕ್ಹೊರ ಹರಿವು : 8841 ಕ್ಯೂಸೆಕ್ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ: 71.535 ಟಿಎಂಸಿಇಂದಿನ ಸಂಗ್ರಹಣೆ : 64.478 ಟಿಎಂಸಿ ತುಂಗಾ ಜಲಾಶಯಗರಿಷ್ಠ ಮಟ್ಟ : 588.24 ಮೀ.ಇಂದಿನ ನೀರಿನ ಮಟ್ಟ : 588.24 ಮೀ.ಒಳಹರಿವು : 10673 ಕ್ಯೂಸೆಕ್ಹೊರ ಹರಿವು : 10673 ಕ್ಯೂಸೆಕ್ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ: 3.24 ಟಿಎಂಸಿಇಂದಿನ ನೀರು ಸಂಗ್ರಹಣ 2.411 ಟಿಎಂಸಿ ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ, ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ: ಬಸವರಾಜ ಬೊಮ್ಮಾಯಿ ಮುಂದಿನ 5 ದಿನಗಳು ಸಾಧಾರಣೆ ಮಳೆ ಮುನ್ಸೂಚನೆ:ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ಗುಡುಗು ಮಿಂಚು ಬಿರುಗಾಳಿ ಸಹಿತ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆ. ಆಗಸ್ಟ್ 13 ರಿಂದ ಆಗಸ್ಟ್ 16 ರವರೆಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆ ಆಗಲಿದೆ. ಇನ್ನು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ಚದುರಿದಿಂದ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.