ಮನೆ ಮಗಳನ್ನೇ ಮುಗಿಸಿತ್ತೇಕೆ ತವರುಮನೆ? ಆ ರಾತ್ರಿ ಅಲ್ಲಿ ನಡೆದಿದ್ದಾದರೂ ಏನು..? ಬಾಗಲಕೋಟೆಯಲ್ಲಿ ನಡೆದ ಭೀಕರ ಕೊಲೆ ಪ್ರಕರಣ ಇಡೀ ತನಿಖೆಗೆ ಹೊರಟ ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಏನಿದು ಪ್ರಕರಣ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ ಅದು ರೈತಾಪಿ ಕುಟುಂಬ. ಅಪ್ಪ, ಅಮ್ಮ. ಐವರು ಮಕ್ಕಳು ಮತ್ತು ಮೊಮ್ಮಕ್ಕಳು. ಇದ್ದ ಮೂರುವರೆ ಎಕರೆ ಭೂಮಿಯಲ್ಲಿ ಕಬ್ಬು ಬೆಳೆದುಕೊಂಡು ಜೀವನ ಸಾಗಿಸುತ್ತಿತ್ತು. ಇದೇ ಜಮೀನಿನಿಂದ ಮೂವರು ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದ ಹೆತ್ತವರು ಇನ್ನುಳಿದ ಇಬ್ಬರು ಮಕ್ಕಳು ಮತ್ತು ಒಬ್ಬ ಮೊಮ್ಮಗನೊಂದಿಗೆ ಜಮೀನಿನಲ್ಲೇ ಇದ್ದ ಶೆಡ್‌ನಲ್ಲಿ ವಾಸ ಮಾಡುತ್ತಿತ್ತು. ಆದ್ರೆ ಆವತ್ತು ರಾತ್ರಿ ಅವರು ವಾಸವಿದ್ದ ಶೆಡ್‌ಗೆ​​ಗೆ ಹಂತಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಬಿಟ್ಟಿದ್ರು. ಅಪ್ಪ, ಮೊಮ್ಮಗ ಹೇಗೋ ತಪ್ಪಿಸಿಕೊಂಡು ಹೊರಬಂದ್ರು. ಆದ್ರೆ ಅಮ್ಮ ಮಗಳು ಮತ್ತು ಮಗ ಅದೇ ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟಿದ್ರು. ಇನ್ನೂ ತನಿಖೆಗಿಳಿದ ಪೊಲೀಸರು ಸೀನ್​ ಆಫ್​ ಕ್ರೈಂ ನೋಡಿ ಬೆಚ್ಚಿಬಿದ್ದಿದ್ರು. ಕಾರಣ ಅದೊಂದು ಪ್ರೀಪ್ಲಾನ್ಡ್​​​ ಬ್ರೂಟಲ್​ ಮರ್ಡರ್​ ಆಗಿತ್ತು. ಅಷ್ಟಕ್ಕೂ ಆ ರಾತ್ರಿ ಆ ಜಮೀನಿನಲ್ಲಿ ನಡೆದಿದ್ದೇನು..? ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟವರ್ಯಾರು..? ಇದೆಲ್ಲವನ್ನ ತಿಳಿದುಕೊಳ್ಳೋಣ ಬನ್ನಿ ಯಸ್​​, ಸ್ಮೆಲ್​ ಬರುತ್ತೆ. ಬಟ್​​ ಇಟ್​ ವಾಸ್​​ ಲೇಟ್​​. ಇಬ್ಬರು ಅಲ್ಲಿ ಸುಟ್ಟು ಕರಕಲಾದ್ರೆ ಒಬ್ಬ ಆಸ್ಪತ್ರೆಯಲ್ಲಿ ಪ್ರಾಣಬಿಡ್ತಾನೆ. ಇದೆಲ್ಲಾ ನೋಡ್ತಿದ್ರೆ ಇದು ಪ್ರೀ ಪ್ಲಾನ್​ಡ್​​ ಅನ್ನೋದು ಖಾತ್ರಿಯಾಗಿತ್ತು. ಹಾಗಾದ್ರೆ ಆ ಶೆಡ್‌ಗೆ ಬೆಂಕಿ ಇಟ್ಟವರ್ಯಾರು..? ಆ ರಾತ್ರಿ ಅಲ್ಲಿ ನಡೆದಿದ್ದೇನು..? ಇಡೀ ಕುಟುಂಬವನ್ನೇ ಸರ್ವನಾಶಮಾಡುವಂತಹ ದ್ವೇಷ ಯಾರಿಗಿತ್ತು..? ಎನ್ನುವುದೇ ಒಂದು ರೋಚಕ ಕಥೆ. ಈ ಬರ್ಬರ ಹತ್ಯೆ ಹೇಗೆ ಮತ್ತೆ ಯಾಕೆ ನಡೆಯಿತು ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ಕೂಲ್ ಕೂಲ್: ಜೈಲಲ್ಲಿ ದಾಸ ಹೇಗಿದ್ದಾರೆ ಅಂತ ಹೇಳಿದ ಸಾಧು ಕೋಕಿಲಾ! ತವರು ಮನೆಯಿಂದ ಅಕ್ಕನಿಗೆ ಒಂದಷ್ಟು ಆಸ್ತಿ ಬಂದಿತ್ತು. ತಂಗಿ ನನಗೂ ಕೊಡಿ ಅಂತ ಹೋಗಿ ಕೇಳಿದಳಷ್ಟೇ. ಆ ಎರಡು ಕುಟುಂಬಗಳ ನಡುವೆ ವೈಮನಸ್ಸು ಉಂಟಾಗುತ್ತೆ. ಪರಿಸ್ಥಿತಿ ಹೀಗಿರುವಾಗಲೇ ತವರು ಮನೆಯ ಮುಂದೆಯೇ ಯಾರೋ ಮಾಟ ಮಂತ್ರದ ವಸ್ತುಗಳನ್ನ ಹಾಕಿಬಿಡ್ತಾರೆ. ಇದಕ್ಕೆ ಮನೆ ಮಗಳ ಕುಟುಂಬವೇ ಕಾರಣ ಅಂತ ತಿಳಿದ ಅವರು. ಆ ಕುಟುಂಬವನ್ನೇ ಮುಗಿಸಲು ನಿರ್ಧರಿಸಿಬಿಡ್ತಾರೆ. ಮೂರು ತಿಂಗಳು ಪ್ಲಾನ್​ ಮಾಡಿ ನಂತರ 100 ಲೀಟರ್​​​ ಪೆಟ್ರೋಲ್​​ ತಂದು ಶೆಡ್‌ಗೆ ಬೆಂಕಿ ಇಟ್ಟೇ ಬಿಡ್ತಾರೆ.! ಸದ್ಯ ಪೊಲೀಸರು ನಾಲ್ವರನ್ನು ಬಂಧಿಸಿ, ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಆದ್ರೆ ತವರು ಮನೆಯ ಆಸ್ತಿಯನ್ನ ಕೇಳಿದ್ರು ಅನ್ನೋ ಒಂದೇ ಕಾರಣಕ್ಕೆ ಆ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟ ಈ ಕಿರಾತಕರಿಗೆ ಅದೇನ್​ ಶಿಕ್ಷೆ ಕೊಟ್ಟರೂ ಕಡಿಮೆನೇ ಅಲ್ವಾ..?