ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗದಕ್ಕೆ ಫ್ಲೈ ಓವರ್‌ನಿಂದ ಜಿಗಿದ ಯುವ ಕ್ರಿಕೆಟಿಗ... ಇಡೀ ಸೀಸನ್ ತಯಾರಿ ನಡೆಸಿದ್ದ! ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕೆಂದು ಸತತವಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದನು. ಆದರೆ ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗಿರಲಿಲ್ಲ. ಚೆನ್ನೈ:ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗದಕ್ಕೆ ನೊಂದ ತಮಿಳುನಾಡಿನ ಯುವ ಕ್ರಿಕೆಟಿಗ ( ) ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 20 ಅಡಿ ಎತ್ತರದಿಂದ (20 ) ಜಿಗಿದಿರುವ ಕಾರಣ ಯುವ ಆಟಗಾರನ ಪ್ರಾಣಪಕ್ಷಿ ಹಾರಿ ಹೋಗಿದೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ( ) ಲಭ್ಯವಾಗಿಲ್ಲ. ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಮಿಳುನಾಡು ಪ್ರೀಮಿಯರ್ ಲೀಗ್‌-2024ಕ್ಕೆ ( 2024) ಆಯ್ಕೆಯಾಗದ ಹಿನ್ನೆಲೆ ನೊಂದಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಮೃತ ಯುವ ಆಟಗಾರನನ್ನು ವಿರುಗಕ್ಕಂಬಾಕ್ಕಂ ನಿವಾಸಿ 26 ವರ್ಷದ ಎಸ್‌.ಸ್ಯಾಮೂಯಲ್ ರಾಜಾ ( ) ಎಂದು ಗುರುತಿಸಿದ್ದಾರೆ. ಜುಲೈ 265ರಂದು ಕಾಠೀಪುರದ ಗುಯಿಂಡಿಯ ( ) 20 ಅಡಿ ಎತ್ತರ ಫ್ಲೈ ಓವರ್‌ನಿಂದ ಜಿಗಿದು ಸ್ಯಾಮೂಯಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಸ್‌.ಸ್ಯಾಮೂಯಲ್ ರಾಜಾ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕೆಂದು ಸತತವಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದನು. ಆದರೆ ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗಿರಲಿಲ್ಲ. ತನ್ನ ಬೈಕ್‌ನಲ್ಲಿ ಎಸ್‌.ಸ್ಯಾಮೂಯಲ್ ರಾಜಾ ಬಟ್ ರಸ್ತೆಯ ಮಾರ್ಗವಾಗಿ ತೆರಳುತ್ತಿದ್ದನು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಫ್ಲೈಒವರ್ ಮೇಲೆ ಬೈಕ್ ನಿಲ್ಲಿಸಿದ ಸ್ಯಾಮೂಯಲ್ ನೋಡನೋಡುತ್ತಿದ್ದಂತೆ ಕೆಳಗೆ ಜಿಗಿದಿದ್ದಾನೆ. ಕೂಡಲೇ ಸ್ಥಳೀಯರು ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ವೈದ್ಯರು ಎಸ್‌.ಸ್ಯಾಮೂಯಲ್ ರಾಜಾ ಮೃತವಾಗಿರೋದನ್ನು ವೈದ್ಯರು ಘೋಷಣೆ ಮಾಡಿದ್ದಾರೆ. ಎಸ್‌.ಸ್ಯಾಮೂಯಲ್ ರಾಜಾ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್! ಪೊಲೀಸರಿಂದ ಮಾಹಿತಿ ಸಂಗ್ರಹ ಎಸ್‌.ಸ್ಯಾಮೂಯಲ್ ರಾಜಾ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಟಿಎನ್‌ಪಿಎಲ್-2024ಕ್ಕೆ ಆಯ್ಕೆಯಾಗದ ಹಿನ್ನೆಲೆ ಸ್ಯಾಮೂಯಲ್ ನೊಂದಿದ್ದನು. ಟಿಎನ್‌ಪಿಎಲ್‌ಗಾಗಿ ಸ್ಯಾಮೂಯಲ್ ಇಡೀ ಸೀಸನ್ ತಯಾರಿ ನಡೆಸಿದ್ದನು ಎಂದು ಮೃತನ ಆಪ್ತ ಗೆಳೆಯರು ಹಾಗೂ ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಮನೆ ಅಥವಾ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು