'ತಿರುಗೇಟು ನೀಡದೇ ಬಿಡಲ್ಲ' ಇರಾನ್‌ ಕ್ಷಿಪಣಿ ದಾಳಿಗೆ ಇಸ್ರೇಲ್‌ ಶಪಥ, 'ಧ್ವಂಸ ಮಾಡಲಿದ್ದೇವೆ' ಇರಾನ್‌ ಎಚ್ಚರಿಕೆ! ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಇರಾನ್ ತನ್ನ ಕ್ಷಿಪಣಿ ದಾಳಿಗೆ ತಿರುಗೇಟು ನೀಡೋದಾಗಿ ಪ್ರತಿಜ್ಞೆ ಮಾಡಿದ್ದಾರೆ. ಇಸ್ರೇಲ್ ಅಥವಾ ಅದರ ಮಿತ್ರರಾಷ್ಟ್ರಗಳಿಂದ ಯಾವುದೇ ಪ್ರತೀಕಾರ ಬಂದಲ್ಲಿ ಸಂಪೂರ್ಣ ಧ್ವಂಸ ಮಾಡಲಿದ್ದೇವೆ ಎಂದು ಟೆಹ್ರಾನ್‌ ಎಚ್ಚರಿಸಿದೆ. ನವದೆಹಲಿ (ಅ.2):ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಬುಧವಾರ ಇಸ್ರೇಲ್‌ಗೆ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದೆ. ಇರಾನ್‌ ಮಾಡಿದ ಕ್ಷಿಪಣಿ ದಾಳಿಗೆ ಏನಾದರೂ ಪ್ರತಿಕ್ರಿಯೆ ನೀಡಿದಲ್ಲಿ ಇಡೀ ಪ್ರದೇಶವನ್ನೇ ಸಂಪೂರ್ಣ ಧ್ವಂಸ ಮಾಡುವುದಾಗಿ ಎಚ್ಚರಿಸಿದೆ. ಲೆಬನಾನ್‌ ಮೇಲೆ ದಾಳಿ ಮಾಡಿ ಹಿಜ್ಬೊಲ್ಲಾ ಮುಖ್ಯಸ್ಥನನ್ನು ಕೊಂದ ಕಾರಣಕ್ಕೆ ಇರಾನ್‌ ಪ್ರತಿಕ್ರಿಯೆ ಎನ್ನುವ ರೂಪದಲ್ಲಿ 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್‌ನತ್ತ ಉಡಾಯಿಸಿತ್ತು. ಇಸ್ರೇಲ್‌ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡ ಕ್ಷಿಪಣಿ ದಾಳಿಯ ಬೆನ್ನಲ್ಲಿಯೇ ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ತಕ್ಷಣವೇ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಇದಕ್ಕೆ ತಿರುಗೇಟು ನೀಡುತ್ತೇವೆ ಎಂದು ಹೇಳಿದರು. ಇನ್ನೊಂದೆಡೆ, ನನ್ನ ಕ್ಷಿಪಣಿ ದಾಳಿ ಮುಕ್ತಾಯ ಕಂಡಿದೆ. ಇಸ್ರೇಲ್‌ ಇನ್ನಷ್ಟು ಪ್ರಚೋದನೆ ನೀಡದ ಹೊರತು ತನ್ನ ದಾಳಿ ಮುಕ್ತಾಯ ಕಂಡಿದ್ದಾಗಿ ತಿಳಿಸಿದೆ. ಈ ನಡುವೆ, ಇಸ್ರೇಲ್ ಡಿಫೆನ್ಸ್ ಫೋರ್ಸಸ್ () ಬುಧವಾರದಂದು ರಾಜಧಾನಿ ಬೈರುತ್ ಸೇರಿದಂತೆ ಲೆಬನಾನ್‌ನ ಕೆಲವು ಭಾಗಗಳಲ್ಲಿ ಹೆಚ್ಚಿನ ಸ್ಥಳಾಂತರಕ್ಕೆ ಆದೇಶಿಸಿದೆ, ಏಕೆಂದರೆ ಅದು ಶಂಕಿತ ಹಿಜ್ಬುಲ್ಲಾ ಗುರಿಗಳ ಮೇಲೆ ದಾಳಿ ಮಾಡೋದನ್ನು ಮುಂದುವರೆಸಿದ್ದಲ್ಲದೆ, ಲೆಬಾನನ್‌ ಮೇಲೆ ಆಕ್ರಮಣವನ್ನು ಇನ್ನಷ್ಟು ತೀವ್ರ ಮಾಡಿದೆ. ಜಗತ್ತಿನ ಅರ್ಧದಷ್ಟು ಭಾಗವನ್ನು ಮುನ್ನಡೆಸುತ್ತಿರುವುದು ಈ 8 ಶ್ರೀಮಂತ ಯಹೂದಿಗಳು! ಹಮಾಸ್‌ ರೀತಿ ದಾಳಿಗೆ ಸಜ್ಜಾಗಿದ್ದ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಇಸ್ರೇಲ್‌-ಇರಾನ್‌ ಉದ್ವಿಗ್ನತೆ: ಇಲ್ಲಿಯವರೆಗಿನ ಬೆಳವಣಿಗೆ