2041ಕ್ಕೆ ಅಸ್ಸಾಂ ಮುಸ್ಲಿಂ ರಾಜ್ಯವಾಗಲಿದೆ;: ಸಿಎಂ ಹಿಮಂತ ಬಿಸ್ವಾ ಶರ್ಮಾ ಕಳವಳ ‘ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಪಿಟಿಐ ಗುವಾಹಟಿ: (ಜು.20):‘ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಅಸ್ಸಾಂ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರತಿ 10 ವರ್ಷಗಳಿಗೊಮ್ಮೆ ಶೇ.30ರಷ್ಟು ಬೆಳೆಯುತ್ತಿದೆ. 2041ರ ವೇಳೆಗೆ ನಮ್ಮ ರಾಜ್ಯ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ’ ಎಂದು ಶುಕ್ರವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಜನಸಂಖ್ಯೆ 10 ವರ್ಷಕ್ಕೊಮ್ಮೆ ಕೇವಲ ಶೇ.16ರಷ್ಟು ಏರಿಕೆಯಾಗುತ್ತಿದೆ ಎಂದರು. ‘ಅಂಕಿಸಂಖ್ಯೆಗಳ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಶೇ.40ರಷ್ಟು ಮುಸ್ಲಿಂ ಜನಸಂಖ್ಯೆಯಿದೆ. 2041ಕ್ಕೆ ಅಸ್ಸಾಂ ಬಹುತೇಕ ಮುಸ್ಲಿಂ ರಾಜ್ಯವಾಗಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬೇಸರಿಸಿದರು. ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ತೀವ್ರ ಹೆಚ್ಚಳ: ಆರ್ಗನೈಸರ್ ನಿಯತಕಾಲಿಕ ವರದಿ 2011ರ ಜನಗಣತಿಯ ಪ್ರಕಾರ, ಅಸ್ಸಾಂ ಒಟ್ಟು 1.07 ಕೋಟಿ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದು, ಒಟ್ಟು 3.12 ಕೋಟಿ ನಿವಾಸಿಗಳಲ್ಲಿ ಶೇ.34.22 ಪ್ರಮಾಣ ಹೊಂದಿದೆ. ರಾಜ್ಯದಲ್ಲಿ 1.92 ಕೋಟಿ ಹಿಂದೂಗಳಿದ್ದು, ಒಟ್ಟು ಜನಸಂಖ್ಯೆಯ ಶೇ.61.47ರಷ್ಟಿದೆ. ಈ ಬಗ್ಗೆ ಪ್ರಸ್ತಾಪಿಸಿದ ಶರ್ಮಾ, ‘ಪ್ರತಿ 10 ವರ್ಷಗಳಿಗೊಮ್ಮೆ, ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ 11 ಲಕ್ಷ ಏರಿಕೆಯಾಗುತ್ತಿದೆ. ಅಂದರೆ ಶೇ.30ರಷ್ಟು ಏರಿಕೆ ಆಗುತ್ತಿದೆ. 2041ರ ವೇಳೆಗೆ ಅಸ್ಸಾಂ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ. ಇದು ವಾಸ್ತವ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಪ್ರತಿ 10 ವರ್ಷಗಳಿಗೊಮ್ಮೆ ಹಿಂದೂ ಸಮುದಾಯದ ಜನಸಂಖ್ಯೆಯು( ) ಸುಮಾರು 16 ಪ್ರತಿಶತದಷ್ಟು ಮಾತ್ರ ಏರುತ್ತಿದೆ. ಇದು ಹಿಮಂತ ಬಿಸ್ವ ಶರ್ಮಾ ( ಅವರ ಡೇಟಾ ಅಲ್ಲ, ಭಾರತೀಯ ಜನಗಣತಿಯ ಮಾಹಿತಿ’ ಎಂದು ಶರ್ಮಾ ಹೇಳಿದರು. ಹೀಗೇ ಆದಲ್ಲಿ ಮುಂದೆ ಬಿಜೆಪಿ, ಟಿಎಂಸಿ, ಕಾಂಗ್ರೆಸ್, ಎಡರಂಗ ಯಾವ ರಾಜಕೀಯ ಪಕ್ಷ ಕೂಡ ಇರೋದಿಲ್ಲ! ಹಿಂದಿನ ಸರ್ಕಾರಗಳು ಮುಸ್ಲಿಂ ಜನಸಂಖ್ಯೆ ನಿಯಂತ್ರಣ( )ಕ್ಕೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅದರ ಏರಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.