ಕಂಡಕ್ಟರ್ ಎದೆ, ಪ್ರೈವೇಟ್ ಪಾರ್ಟ್ ಟಚ್ ಮಾಡಿದ; ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಹೈದರಾಬಾದ್:ಸರ್ಕಾರಿ ಬಸ್‌ನಲ್ಲಿ ( ) ಅನುಭವಿಸಿದ ಲೈಂಗಿಕ ಕಿರುಕುಳದ ( ) ಬಗ್ಗೆ ಮಹಿಳೆಯೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತೆಲಂಗಾಣದ () ಸರ್ಕಾರಿ ಬಸ್‌ ನಲ್ಲಿ ಮಹಿಳೆ ( ) ಮನಿಕೊಂಡದಿಂದ ಹಿಮಾಯತ್ ನಗರಕ್ಕೆ ತೆರಳುತ್ತಿದ್ದರು. ಬಸ್‌ ನಲ್ಲಿ ಕಂಡಕ್ಟರ್ ( ) ತನ್ನ ಎದೆ ಮತ್ತು ಪ್ರೈವೇಟ್ ಪಾರ್ಟ್ ( ) ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. 21 ವರ್ಷದ ಮಹಿಳೆ 65M/123 ಮೆಹಧಿಪಟ್ಟಣಂ ಬಸ್‌ ಹತ್ತಿದ್ದಾರೆ. ಬಸ್ ಪ್ರಯಾಣಿಕರಿಂದ ತುಂಬಿತ್ತು. ಜನಸಂದಣಿ ಬಸ್‌ನಲ್ಲಿದ್ದ ಕಂಡಕ್ಟರ್ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಮುಂದೆ ಯಾವುದೇ ಮಹಿಳೆ ದೌರ್ಜನ್ಯದಿಂದ ಒಳಗಾಗಬಾರದು ಎಂದು ಧ್ವನಿ ಎತ್ತುತ್ತಿದ್ದೇನೆ. 65M/123 ಬಸ್ ಪ್ರಯಾಣಿಕರಿಂದ ತುಂಬಿರೋದನ್ನು ತನ್ನ ಲಾಭಕ್ಕೆ ಕಂಡಕ್ಟರ್ ಬಳಸಿಕೊಂಡಿದ್ದಾರೆ. ಆತ ಎದೆ ಮತ್ತು ಪ್ರೈವೇಟ್ ಪಾರ್ಟ್ ಟಚ್ ಮಾಡುತ್ತಿದ್ದಂತೆ ನಾನು ಜೋರಾಗಿ ಕಿರುಚಿಕೊಂಡೆ. ತೆಲಂಗಾಣ ಸಾರಿಗೆ ಸಂಸ್ಥೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ. ಈ ಟ್ವೀಟ್‌ನನ್ನು ಸಿಎಂ ರೇವಂತ್ ರೆಡ್ಡಿಯವರಿಗೂ ಟ್ಯಾಗ್ ಮಾಡಲಾಗಿದೆ. ಮಹಿಳೆಯ ಟ್ವೀಟ್‌ಗೆ ತೆಲಂಗಾಣ ಸಾರಿಗೆ ಸಂಸ್ಥೆಯ ಎಂಡಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಉಂಟಾದ ಅನಾನುಕೂಲತೆಗೆ ಕ್ಷಮೆ ಕೇಳುತ್ತೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. ಜುಲೈ 15ರಂದು ಈ ಘಟನೆ ನಡೆದಿದೆ.