ವಿಶ್ವ ನಾಯಕ ಮೋದಿಗೆ 10 ಕೋಟಿ ‘ಎಕ್ಸ್‌’ ಫಾಲೋವರ್ಸ್‌: ಮೈಲಿಗಲ್ಲು! ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವೀಟರ್) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ 10 ಕೋಟಿ ಫಾಲೋವರ್ಸ್‌ ಹೊಂದಿರುವ ಮೊದಲ ಜಾಗತಿಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನವದೆಹಲಿ (ಜು.15):ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವೀಟರ್) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ 10 ಕೋಟಿ ಫಾಲೋವರ್ಸ್‌ ಹೊಂದಿರುವ ಮೊದಲ ಜಾಗತಿಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜಾಗತಿಕ ನಾಯಕರಾದ ಅಮೆರಿಕ ಅಧ್ಯಕ್ಷ ಜೋ ಬೈಡನ್( ) 3.81 ಕೋಟಿ , ಪೋಪ್ ಫ್ರಾನ್ಸಿಸ್‌ 1.85 ಕೋಟಿ, ದುಬೈ ಆಡಳಿತಗಾರ ಶೇಖ್‌ ಮೊಹಮ್ಮದ್‌ 1.12 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ( ) 2.64 ಕೋಟಿ ,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್( ) 2.75 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. : ಮೋದಿ ಮತ್ತು ಆರೆಸ್ಸೆಸ್‌ ನಡುವೆ ಏನಾಗ್ತಿದೆ? ವಿರಾಟ್ ಕೊಹ್ಲಿ, ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್‌, ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್, ಹಾಲಿವುಡ್‌ನ ಟೇಲರ್ ಸ್ವಿಫ್ಟ್, ಲೇಡಿ ಗಾಗಾ ಮತ್ತು ಕಿಮ್ ಕರ್ದಶಿಯನ್‌ರತಹ ಸೆಲೆಬ್ರಿಟಿಗಳಿಗಿಂತಲೂ ಮುಂದಿದ್ದಾರೆ ಮೋದಿ ಮುಂದಿದ್ದಾರೆ.ಮೋದಿ ಹರ್ಷ:ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ‘100 ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರುವುದಕ್ಕೆ ಸಂತೋಷವಾಗಿದೆ. ಈ ಮಾಧ್ಯಮದಲ್ಲಿ ಚರ್ಚೆ, ಚರ್ಚೆ, ಒಳನೋಟಗಳು, ಜನರ ಆಶೀರ್ವಾದ, ರಚನಾತ್ಮಕ ಟೀಕೆಗಳು ಇರುತ್ತವೆ. ಭವಿಷ್ಯದಲ್ಲಿ ಕೂಡ ಈ ಮಾಧ್ಯಮದಲ್ಲಿ ಇದನ್ನೇ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.