ಬೆಂಗಳೂರಿನಲ್ಲಿ ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ: ಹೊಸ ವ್ಯವಸ್ಥೆ ಅ.1ರಿಂದ ಆರಂಭ ಬೆಂಗಳೂರು ಮಹಾನಗರ ಪಾಲಿಕೆ () ಅಕ್ಟೋಬರ್ 1, 2024 ರಿಂದ ಸಂಪರ್ಕರಹಿತ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ. ನಾಗರಿಕರು ತಮ್ಮ ಆಸ್ತಿಗಳ ಕರಡು ಇ-ಖಾತಾಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅಂತಿಮ ಇ-ಖಾತಾ ಪಡೆಯಲು ಹೆಚ್ಚುವರಿ ಮಾಹಿತಿಯನ್ನು ಒದಗಿಸಬಹುದು. ಬೆಂಗಳೂರು (ಸೆ.30):ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಿನಾಂಕ 01-10-2024 ರಿಂದ ಫೇಸ್‌ಲೆಸ್, ಸಂಪರ್ಕರಹಿತ ಹಾಗೂ ಆನ್ಲೈನ್ ಮೂಲಕ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪಾಲಿಕೆಯಲ್ಲಿ ಪರೀಕ್ಷಾರ್ಥವಾಗಿ ಪ್ರಾರಂಭಿಸುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. 1) ಬಿಬಿಎಂಪಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರ ಕರಡು ಇ-ಖಾತಾವನ್ನು ಆನ್‌ಲೈನ್‌,....inನಲ್ಲಿ ರಚಿಸಿ, ಇರಿಸಲಾಗಿರುತ್ತದೆ.2) ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ, ತಮ್ಮ ಸ್ವತ್ತಿನ ಕರಡು ಇ-ಖಾತಾವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರತ್ತದೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ಬುಧವಾರ ಮಾಂಸ ಮಾರಾಟ ನಿಷೇಧಿಸಿದ ಬಿಬಿಎಂಪಿ! 3) ನಾಗರೀಕರು ತಮ್ಮ ಸ್ವತ್ತಿನ ಅಂತಿಮ ಇ-ಖಾತಾವನ್ನು ಪಡೆಯಲು ಆನ್‌ಲೈನ್‌ಮೂಲಕ ಈ ಕೆಳಕಂಡ ಹೆಚ್ಚುವರಿ ಮಾಹಿತಿಗಳನ್ನು ಅಥವಾ ಕರಡು ಇ-ಖಾತಾದಲ್ಲಿರುವ ಅಂಶಗಳನ್ನು ಒಳಗೊಂಡಂತೆ, ಒದಗಿಸಬೇಕಾಗಿರುತ್ತದೆ.ಆಧಾರ್ ಇ-ಕೆವೈಸಿಸ್ವತ್ತಿನ ಜಿ.ಪಿ.ಎಸ್ಸ್ವತ್ತಿನ ಪೋಟೋಸ್ವತ್ತಿನ ನೋಂದಾಯಿತ ದಸ್ತಾವೇಜುಸ್ವತ್ತಿನ ಇ.ಸಿ ದಿನಾಂಕ 01-04-2004 ರಿಂದ ಈ ತಹಲ್‌ವರೆವಿಗೂಬೆಸ್ಕಾಂ ಮೀಟರ್ ಸಂಖ್ಯೆಎ-ಖಾತಾ ಎಂದು ಧೃಡೀಕರಿಸುವ ಸಂಬಂಧ ಹೆಚ್ಚುವರಿ ಇನ್ನಿತರೆ ದಾಖಲಾತಿಗಳು 4) ನಾಗರೀಕರು ಮೇಲಿನ ಯಾವುದೇ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ನಿಯಮಾವಳಂತೆ ಅಂತಿಮ ಇ-ಖಾತಾವನ್ನು ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಭೇಟಿ ಮಾಡಲು ಅವಕಾಶವಿರುತ್ತದೆ.5) ಸ್ವತ್ತಿನ ಮಾಲೀಕರು ಅಂತಿಮ ಇ ಖಾತಾವನ್ನು ವಿತರಿಸದಂತೆ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ಕರಡು ಇ-ಖಾತಾವನ್ನು ರಚಿಸಿದ 7 ದಿನಗಳವರೆಗೆ ಆಕ್ಷೇಪಣೆ ಅವಧಿಯನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಆಕ್ಷೇಪಣೆಯ ವಿಚಾರಣೆ ಕೈಗೊಂಡು ಆದ್ಯತಾನುಸಾರ ನಿರ್ಧರಿಸುತ್ತಾರೆ. ಇದನ್ನೂ ಓದಿ:ನೀವು ಅಣಬೆ ಬೆಳೆದು ಹಣ ಗಳಿಸಬೇಕಾ? ಈ ಒಂದು ದಿನದ ತರಬೇತಿಗೆ ಹಾಜರಾಗಿ! 6) ಮೇಲಿನ ಕಾರ್ಯವಿಧಾನದಂತೆ ಅಂತಿಮ ಇ-ಖಾತಾವನ್ನು ವಿತರಿಸಲಾಗುತ್ತದೆ. ಮೇಲಿನ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ವಿಡಿಯೋವನ್ನು ಪ್ರತ್ಯೇಕವಾಗಿ ಬಿಡುಗಡೆಗೊಳಿಸಲಾಗುವುದು.7) ಬೃಹತ್ ಸ್ವರೂಪದಲ್ಲಿ ಇ-ಖಾತಾ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಾಗಿರುವುದರಿಂದ ಪರೀಕ್ಷಾರ್ಥವಾಗಿ ಪ್ರಾರಂಭಿಸುವ ಮೂಲಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲಾಗುವುದು. ಬಿಬಿಎಂಪಿಯು ತಮಗೆ ಅತ್ಯಮೂಲ್ಯ ಸೇವೆ ನೀಡಲು ಸಹಕರಿಸಲು ಕೋರಿದೆ. ಇ-ಖಾತಾ ಪಡೆಯುವ ವಿಧಾನಗಳು: