ಬಡವರ ಬದುಕಿಗೆ ಮತ್ತೊಂದು ಹೊರೆ; ಹಾಲು, ಪೆಟ್ರೋಲ್‌ ಆಯ್ತು.. ಮೊಬೈಲ್‌ ರಿಚಾರ್ಜ್‌ ಕೂಡ ಈಗ ದುಬಾರಿ! ಜನಸಾಮಾನ್ಯರ ಬದುಕಿಗೆ ಮತ್ತೊಂದು ಬರೆ ಬಿದ್ದಿದೆ. ರಾಜ್ಯ ಸರ್ಕಾರ ಪೆಟ್ರೋಲ್‌-ಡೀಸೆಲ್‌ ಹಾಗೂ ಹಾಲಿನ ಬೆಲೆಯನ್ನು ಏರಿಕೆ ಮಾಡಿದ ಬೆನ್ನಲ್ಲಿಯೇ ರಿಲಯನ್ಸ್‌ ಕಂಪನಿ ಜಿಯೋ ರಿಚಾರ್ಜ್‌ ಬೆಲೆಗಳನ್ನು ಶೇ. 25ರಷ್ಟು ಏರಿಕೆ ಮಾಡಿದೆ. ಬೆಂಗಳೂರು (ಜೂ.27):ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ. ಈಗಾಗಲೇ ಅಸ್ವಿತ್ವದಲ್ಲಿರುವ ಜನಪ್ರಿಯ ರಿಚಾರ್ಜ್‌ ಪ್ಲ್ಯಾನ್‌ಗಳನ್ನು ಶೇ. 25ರಷ್ಟು ದುಬಾರಿ ಮಾಡಲಾಗಿದೆ. ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ 155 ರೂಪಾಯಿ ರಿಚಾರ್ಜ್‌ ಪ್ಲ್ಯಾನ್‌ ಜುಲೈ 3 ರಿಂದ 189 ರೂಪಾಯಿಗೆ ಏರಲಿದೆ. ಇದರಲ್ಲಿ ಶೇ. 22ರಷ್ಟು ಏರಿಕೆಯಾಗಿದೆ. ಅಚ್ಚರಿ ಏನೆಂದರೆ, ಭಾರ್ತಿ ಏರ್‌ಟೆಲ್‌ಗಿಂತ ಮೊದಲು ಜಿಯೋ ಈ ಬಾರಿ ರಿಚಾರ್ಜ್‌ ಬೆಲೆಯಲ್ಲಿ ಏರಿಕೆಯನ್ನು ಘೋಷಣೆ ಮಾಡಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್‌ ಗ್ರಾಹಕರನ್ನು ಹೊಂದಿರುವ ಜಿಯೋ ತಮ್ಮ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್‌ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಡ್‌ ಪ್ಲ್ಯಾನ್‌ಗಳಾಗಿವೆ. ಯಾವೆಲ್ಲಾ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಲಾಗಿದೆ ಅನ್ನೋದರ ವಿವರ ಇಲ್ಲಿದೆ.155 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಈ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅನಿಯಮಿತ 5G ಡೇಟಾವನ್ನು ನೀಡುತ್ತಿದ್ದ ರೂ 239 ಯೋಜನೆಯು ಇನ್ನು ಮುಂದೆ ಹಾಗರ ಇರೋದಿಲ್ಲ. 239 ಪ್ಲಾನ್ ಈಗ ರೂ 299 ವೆಚ್ಚವಾಗಲಿದೆ ಮತ್ತು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈಗ ಅನಿಯಮಿತ 5G ಡೇಟಾವು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಪ್ರಂಉಕವಾಗಿ ಗಮನಿಸಬೇಕಿದೆ. ಹೊಸ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರಲಿವೆ. ರಿಲಯನ್ಸ್ ಜಿಯೋ ಕೂಡ ಹೊಸ ಸೇವೆಗಳನ್ನು ಪ್ರಾರಂಭಿಸಿದೆ. ಮತ್ತು ಅನ್ನು ಪ್ರಾರಂಭ: ಪ್ಲ್ಯಾನ್‌ಗೆ ಬೆಲೆ ಏರಿಕೆಯೊಂದಿಗೆ ಜಿಯೋ ಮತ್ತು ಅನ್ನು ಘೋಷಿಸಿದೆ. ಕರೆ, ಸಂದೇಶ ಕಳುಹಿಸುವಿಕೆ, ಫೈಲ್ ವರ್ಗಾವಣೆ ಮತ್ತು ಹೆಚ್ಚಿನವುಗಳಿಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್ ಆಗಿದೆ ಮತ್ತು ತಿಂಗಳಿಗೆ 199 ರೂ.ಗೆ ಲಭ್ಯವಿರುತ್ತದೆ. ಎಂಬುದು ಧ್ವನಿ ಕರೆ, ಧ್ವನಿ ಸಂದೇಶ, ಪಠ್ಯ ಮತ್ತು ಚಿತ್ರವನ್ನು ತಿಂಗಳಿಗೆ 99 ರೂಪಾಯಿಗಳಿಗೆ ಭಾಷಾಂತರಿಸಲು ಬಹು-ಭಾಷಾ ಸಂವಹನ ಅಪ್ಲಿಕೇಶನ್ ಆಗಿದೆ. ಜಿಯೋ ತನ್ನ ಬಳಕೆದಾರರು ತಿಂಗಳಿಗೆ 298 ರೂಪಾಯಿ ಮೌಲ್ಯದ ಈ ಎರಡೂ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ ಎಂದು ಹೇಳಿದೆ. ಭಾರತದಲ್ಲಿ ಸ್ಯಾಟ್‌ಲೈಟ್ ಇಂಟರ್‌ನೆಟ್ ಸ್ಥಾಪನೆಗೆ ಅನುಮತಿ ಪಡೆದ ಜಿಯೋಈಗಾಗಲೇ ಹಾಲು ಹಾಗೂ ಪೆಟ್ರೋಲ್‌ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯನಿಗೆ ಒಂದೇ ತಿಂಗಳಲ್ಲಿ 5 ರೂಪಾಯಿ ಹೊರೆ ಬಿದ್ದಿತ್ತು. ಈಗ ಅಗತ್ಯ ಸೇವೆಯಾಗಿರುವ ಮೊಬೈಲ್‌ ರಿಚಾರ್ಜ್‌ನಲ್ಲಿ (ಕನಿಷ್ಠ ಪ್ಲ್ಯಾನ್‌ನ ಲೆಕ್ಕಾಚಾರದಲ್ಲಿ) ಬೆಲೆ ಏರಿಕೆ ಮಾಡಿದ್ದರಿಂದ ಒಂದೇ ತಿಂಗಳಲ್ಲಿ ಗ್ರಾಹಕರ ಜೇಬಿಗೆ 40 ರೂಪಾಯಿ ಬರೆ ಬೀಳಲಿದೆ. ಅಬ್ಬಾ, ಅಂಬಾನಿ ಮಗನ ಮದುವೆ ನಡೆಯೋ ಹಾಲ್ ಬಾಡಿಗೆ ದಿನಕ್ಕೆ ಇಷ್ಟೊಂದಾ? ರಿಯಲನ್ಸ್‌ ಜಿಯೋ ಹೊಸ ಪ್ಲ್ಯಾನ್‌ಗಳ ವಿವರ