ಮತ್ತೆ ಬದಲಾದ ಪೆಟ್ರೋಲ್ ಡೀಸೆಲ್ ದರ, ಬೆಂಗಳೂರು ಸೇರಿ ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ ಬೆಲೆ? ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬದಲಾವಣೆಯಾಗಿದೆ. ಮಾರಾಟ ತೆರಿಗೆ ಏರಿಕೆ ಬಳಿಕ ಇಂಧನ ದರ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇಂದಿನ ಪೆಟ್ರೋಲ್ ಡೀಸೆಲ್ ದರ ಇಲ್ಲಿದೆ. ಬೆಂಗಳೂರು(ಜೂ.23)ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕಳೆದ ಕೆಲ ದಿನಗಳಿಂದ ವ್ಯತ್ಯಾಸವಾಗುತ್ತಿದೆ. ಜೂನ್ 16ರಂದು ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿತ್ತು. ಇದಾದ ಬಳಿಕ ಏರಿಳಿತ ಕಾಣುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಹೈರಣಾಗುತ್ತಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದನ ಬೆಲೆಯಲ್ಲಿ ಬದಲಾವಣೆಯಾಗಿದೆ. ನಿನ್ನೆ 6 ಪೈಸೆ ಏರಿಕೆಯಾಗಿದ್ದರೆ, ಇಂದು 6 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 88.94 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ 87.62 ರೂಪಾಯಿ ಆಗಿದ್ದರೆ, ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 100.85 ರೂಪಾಯಿ, ಡೀಸೆಲ್ ಬೆಲೆ 92.43 ರೂಪಾಯಿ ಆಗಿದೆ. ಗೋವಾದಲ್ಲಿ ನಿನ್ನೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂಪಾಯಿ ತೆರಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಗೋವಾದಲ್ಲೂ ಇಂದನ ದುಬಾರಿಯಾಗಿದೆ. ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ? ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರದ ವಿವರ ಇಲ್ಲಿದೆ. ಬಾಗಲಕೋಟೆ: ಪೆಟ್ರೋಲ್ ದರ: 103.21 ರೂಬೆಳಗಾವಿ: ಪೆಟ್ರೋಲ್ ದರ: 102.68 ರೂಧಾರವಾಡ: ಪೆಟ್ರೋಲ್ ದರ: 102.62 ರೂಗದಗ: ಪೆಟ್ರೋಲ್ ದರ: 103.80ರೂಹಾವೇರಿ: ಪೆಟ್ರೋಲ್ ದರ: 103.72 ರೂಉತ್ತರ ಕನ್ನಡ: ಪೆಟ್ರೋಲ್ ದರ: 103.91ರೂವಿಜಯಪುರ: ಪೆಟ್ರೋಲ್ ದರ: 102.64ರೂಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.66ರೂಬೆಂಗಳೂರು ನಗರ: ಪೆಟ್ರೋಲ್ ದರ: 102.86 ರೂಚಿಕ್ಕಬಳ್ಳಾಪುರ: ಪೆಟ್ರೋಲ್ ದರ:103.48 ರೂಚಿತ್ರದುರ್ಗ: ಪೆಟ್ರೋಲ್ ದರ: 104.22ರೂದಾವಣಗೆರೆ: ಪೆಟ್ರೋಲ್ ದರ: 104.33ರೂಕೋಲಾರ: ಪೆಟ್ರೋಲ್ ದರ: 102.60ರೂರಾಮನಗರ: ಪೆಟ್ರೋಲ್ ದರ: 102.98 ರೂಶಿವಮೊಗ್ಗ: ಪೆಟ್ರೋಲ್ ದರ: 103.85 ರೂತುಮಕೂರು: ಪೆಟ್ರೋಲ್ ದರ: 104.39 ರೂಬಳ್ಳಾರಿ: ಪೆಟ್ರೋಲ್ ದರ: 104.71 ರೂಬೀದರ್: ಪೆಟ್ರೋಲ್ ದರ: 103.47ರೂಕಲಬುರಗಿ: ಪೆಟ್ರೋಲ್ ದರ: 103.43ರೂಕೊಪ್ಪಳ: ಪೆಟ್ರೋಲ್ ದರ: 103.82ರೂರಾಯಚೂರು: ಪೆಟ್ರೋಲ್ ದರ:103.78 ರೂವಿಜಯನಗರ: ಪೆಟ್ರೋಲ್ ದರ: 105.01 ರೂಯಾದಗಿರಿ: ಪೆಟ್ರೋಲ್ ದರ: 103.71 ರೂಚಾಮರಾಜನಗರ: ಪೆಟ್ರೋಲ್ ದರ: 102.66ರೂಚಿಕ್ಕಮಗಳೂರು: ಪೆಟ್ರೋಲ್ ದರ: 104.91 ರೂದಕ್ಷಿಣ ಕನ್ನಡ: ಪೆಟ್ರೋಲ್ ದರ: 102.32ರೂಹಾಸನ: ಪೆಟ್ರೋಲ್ ದರ: 102.72ರೂಕೊಡಗು: ಪೆಟ್ರೋಲ್ ದರ: 103.90 ರೂಮಂಡ್ಯ: ಪೆಟ್ರೋಲ್ ದರ: 103.12ರೂಮೈಸೂರು : ಪೆಟ್ರೋಲ್ ದರ: 102.41ರೂಉಡುಪಿ: ಪೆಟ್ರೋಲ್ ದರ: 102.28ರೂ ಸಾಲ ಕೊಟ್ಟಿದ್ದಕ್ಕೆ ಸಾಕ್ಷಿ‌ ಇಲ್ವಾ? ಹೀಗೆ ಮಾಡಿದ್ರೆ ಹಣ ವಾಪಸ್ ಸಿಗುತ್ತೆಂದ ಮಹಿಳೆ ವಿಡಿಯೋ ವೈರಲ್!