1,259 ಅನಧಿಕೃತ ಫ್ಲೆಕ್ಸ್‌ ಬ್ಯಾನರ್‌ ತೆರವು: 12 ಎಫ್‌ಐಆರ್‌ ದಾಖಲು! ಜೂನ್‌ 1ರಿಂದ ಈವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ಅವುಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 12 ಎಫ್‌ಐಆರ್‌ ದಾಖಲಿಸಲಾಗಿದೆ. ಬೆಂಗಳೂರು (ಜೂ.13):ನಗರದಲ್ಲಿ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯ ಆರಂಭಿಸಿರುವ ಬಿಬಿಎಂಪಿ, ಜೂನ್‌ 1ರಿಂದ ಈವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ಅವುಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 12 ಎಫ್‌ಐಆರ್‌ ದಾಖಲಿಸಲಾಗಿದೆ. ಹೈಕೋರ್ಟ್‌ ಸೂಚನೆ ನಂತರವೂ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆ ಸ್ಥಗಿತಗೊಂಡಿರಲಿಲ್ಲ. ಜತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹಾಗೆಯೇ, ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ಕಂಡು ಬಂದರೆ ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಕುಮಾರ ಪಾರ್ಕ್‌ನ ಸರ್ಕಾರಿ ನಿವಾಸದಲ್ಲೇ ಇನ್ನು ಡಿಕೆಶಿ ಲಭ್ಯ: ಸದಾಶಿವನಗರಕ್ಕೆ ಬಾರದಂತೆ ಸೂಚನೆ ಸಚಿವರ ಎಚ್ಚರಿಕೆ ಪರಿಣಾಮ ಬಿಬಿಎಂಪಿ ಅಧಿಕಾರಿಗಳು ಇದೀಗ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ತೆರವು ಕಾರ್ಯಾಚರಣೆಗೆ ವೇಗ ನೀಡಿದ್ದಾರೆ. ಜೂ.1ರಿಂದ 12ರವರೆಗೆ 1,259 ಫ್ಲೆಕ್ಸ್‌, ಬ್ಯಾನರ್‌, ಎಲ್‌ಇಡಿ ಹಾಗೂ ಹೋರ್ಡಿಂಗ್ಸ್‌ಗಳನ್ನು ತೆರವು ಮಾಡಿ, ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ 27 ದೂರುಗಳನ್ನು ದಾಖಲಿಸಲಾಗಿದೆ. ದೂರು ಆಧರಿಸಿ ಪೊಲೀಸರು 12 ಎಫ್‌ಐಆರ್‌ ದಾಖಲಿಸಿದ್ದಾರೆ. ಬಿಬಿಎಂಪಿಗೆ ದೂರು ನೀಡಿ:ಸಾರ್ವಜನಿಕರು ಫ್ಲೆಕ್ಸ್‌, ಬ್ಯಾನರ್‌ಗಳ ವಿರುದ್ಧ ಬಿಬಿಎಂಪಿಗೆ ದೂರು ದಾಖಲಿಸಬಹುದು. ಜನರು ತಮಗೆ ಫ್ಲೆಕ್ಸ್‌, ಬ್ಯಾನರ್‌ ಕುರಿತಂತೆ 1533ಗೆ ಕರೆ ಮಾಡಿ ಅಥವಾ ಬಿಬಿಎಂಪಿ ಜಾಹೀರಾತು ವಿಭಾಗದ ವಾಟ್‌ಆ್ಯಪ್‌ ಸಂಖ್ಯೆ 94806 83939ಗೆ ಛಾಯಾಚಿತ್ರ ಅಥವಾ ವಿಡಿಯೋವನ್ನು ವಿಳಾಸ ಸಹಿತ ಕಳುಹಿಸಿ ದೂರು ನೀಡಬಹುದಾಗಿದೆ. ಬೆಳಗಾವಿ ಕೋರ್ಟ್‌ ಆವರಣದಲ್ಲೇ ಕೈದಿಯಿಂದ ಪಾಕ್‌ ಪರ ಘೋಷಣೆ! ಫ್ಲೆಕ್ಸ್‌, ಬ್ಯಾನರ್‌ ತೆರವಿನ ವಿವರ (ಜೂ. 1ರಿಂದ12ರವರೆಗೆ)ವಲಯ ತೆರವು ದೂರು ಎಫ್‌ಐಆರ್‌ ದಾಖಲುಪೂರ್ವ 2430000ಪಶ್ಚಿಮ 151500ದಕ್ಷಿಣ 860202ರಾ.ರಾ.ನಗರ 3830707ದಾಸರಹಳ್ಳಿ 840000ಮಹದೇವಪುರ 3360000ಯಲಹಂಕ 1050000ಬೊಮ್ಮನಹಳ್ಳಿ 070303ಒಟ್ಟು 1,2592712