ಗೃಹ ಉಳಿಸಿಕೊಂಡ ಶಾ, ಮೋದಿ 3.0 ಸಂಪುಟದ ಸಚವರಿಗೆ ಖಾತೆ ಹಂಚಿಕೆ; ಯಾರು ಯಾವ ಮಂತ್ರಿ! ನರೇಂದ್ರ ಮೋದಿ 3. ಸರ್ಕಾರದಲ್ಲಿ 72 ಸಚಿವರು ಪ್ರಮಾಣವಚನ ಸ್ವೀಕರಿಸಿ ಸಂಪುಟ ಸೇರಿಕೊಂಡಿದ್ದರು. ಇದೀಗ ಎಲ್ಲಾ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನವದೆಹಲಿ(ಜೂ.10) ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಭಾನುವಾರ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೋದಿ ಜೊತೆಗೆ 71 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ನಿತಿನ್ ಗಡ್ಕರಿಗೆ ತಮ್ಮ ರಸ್ತೆ ಹಾಗೂ ಸಾರಿಗೆ ಸಚಿವಾಲಯ ಖಾತೆಯನ್ನು ಉಳಿಸಿಕೊಂಡಿದ್ದಾರೆ. ಇನ್ನು ಎಸ್ ಜೈಶಂಕರ್‌ ತಮ್ಮ ವಿದೇಶಾಂಗ ಸಚಿವ ಖಾತೆ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅಮಿತ್ ಶಾ ಈ ಬಾರಿಯೂ ಗೃಹ ಸಚಿವರಾಗಿ ಮುಂದುವರಿಯಲಿದ್ದಾರೆ. ರಾಜನಾಥ್ ಸಿಂಗ್‌ಗೆ ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಣಾ ಖಾತೆ ನೀಡಲಾಗಿದೆ. ಅಶ್ವಿನಿ ವೈಷ್ಣವ್‌ಗೆ ಮಾಹಿತಿ ಹಾಗೂ ತಂತ್ರಜ್ಞಾನ ಖಾತೆ ಜೊತೆಗೆ ರೈಲ್ವೇ ಖಾತೆ ನೀಡಲಾಗಿದೆ. ನಿರ್ಮಾಲಾ ಸೀತಾರಾಮನ್‌ಗೆ ಎರಡನೇ ಬಾರಿಗೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದೆ. ಮನೋಹರ್ ಲಾಲ್ ಖಟ್ಟರ್‌ಗೆ ಇಂಧನ ಹಾಗೂ ವಸತಿ ಖಾತೆ ನೀಡಲಾಗಿದೆ. ಜೆಪಿ ನಡ್ಡಾಗೆ ಆರೋಗ್ಯ ಖಾತೆ ನೀಡಲಾಗಿದೆ. ಪಿಯೂಷ್ ಗೋಯೆಲ್‌ಗೆ ವಾಣಿಜ್ಯ ಖಾತೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ನೀಡಲಾಗಿದೆ. ಮಾನ್ಸುಕ್ ಮಾಂಡವಿಯಾಗೆ ಕಾರ್ಮಿಕ ಸಚಿವಾಲಯ ಖಾತೆ ನೀಡಲಾಗಿದೆ. ಶಿವರಾಜ್ ಸಿಂಗ್‌ಗೆ ಕೃಷಿ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ. ಮೋದಿ ಪ್ರಧಾನಿಯಾದ ಮೊದಲ ದಿನವೇ ರೈತರ ಖಾತೆಗೆ 20,000 ಕೋಟಿ ರೂ ಹಣ ಜಮೆ! ಹೆಚ್‌ಡಿ ಕುಮಾರಸ್ವಾಮಿಗೆ ಉಕ್ಕ ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ನೀಡಲಾಗಿದೆ. ನರೇಂದ್ರ ಮೋದಿ 2.0 ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸಿದ ಸಚಿವರಿಗೆ ಅದೇ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಾರಿಗೆ ಹೆದ್ದಾರಿ ರಾಜ್ಯ ಖಾತೆಯನ್ನು ಇಬ್ಬರಿಗೆ ಹಂಚಲಾಗಿದೆ. ಹರ್ಷ ಮಲ್ಹೋತ್ರ ಹಾಗೂ ಅಜಯ್ ತಮ್ತಾ ಇಬ್ಬರಿಗೆ ಸಾರಿಗೆ ಹೆದ್ದಾರಿ ಖಾತೆ ಹಂಚಲಾಗಿದೆ. ಕ್ಯಾಬಿನೆಟ್ ಮಂತ್ರಿಗಳುರಾಜ್ ನಾಥ್ ಸಿಂಗ್: ರಕ್ಷಣಾ ಖಾತೆಅಮಿತ್ ಶಾ: ಗೃಹ ಖಾತೆನಿತಿನ್ ಗಡ್ಕರಿ: ರಸ್ತೆ ಹೆದ್ದಾರಿ ಖಾತೆಜೆಪಿ ನಡ್ಡಾ: ಆರೋಗ್ಯ ಖಾತೆ, ರಾಸಾಯನಿಕ ಹಾಗೂ ರಸಗೊಬ್ಬರಶಿವರಾಜ್ ಸಿಂಗ್ ಚೌಹಾಣ್: ಕೃಷಿ ಖಾತೆ, ಗ್ರಾಮೀಣ ಅಭಿವೃದ್ಧಿನಿರ್ಮಲಾ ಸೀತಾರಾಮನ್: ಹಣಕಾಸು, ಕಾರ್ಪೋರೇಟ್ ಅಫೈರ್ಸ್ಡಾ.ಸುಬ್ರಹ್ಮಣ್ಯಂ ಜೈಶಂಕರ್: ವಿದೇಶಾಂಗಮನೋಹರ್ ಲಾಲ್: ಇಂಧನ ಹಾಗೂ ವಸತಿ ಖಾತೆಹೆಚ್ ಡಿ ಕುಮಾರಸ್ವಾಮಿ: ಉಕ್ಕು ಮತ್ತು ಬೃಹತ್ ಕೈಗಾರಿಕೆಪಿಯೂಷ್ ಗೋಯಲ್: ವಾಣಿಜ್ಯ ಖಾತೆಧರ್ಮೇಂದ್ರ ಪ್ರಧಾನ್: ಶಿಕ್ಷಣಜಿತನ್ ರಾಮ್ ಮಾಂಝಿ: ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆರಾಜೀವ್ ರಂಜನ್ ಸಿಂಗ್ : ಪಶುಸಂಗೋಪನೆ ಮತ್ತು ಮೀನುಗಾರಿಕೆಸರ್ಬಾನಂದ ಸೋನೋವಾಲ್: ಬಂದರುವೀರೇಂದ್ರ ಕುಮಾರ್ ಡಾ: ಸಾಮಾಜಿಕ ನ್ಯಾಯ ಖಾತೆರಾಮಮೋಹನ್ ನಾಯ್ಡು: ನಾಗರೀಕ ವಿಮಾನಯಾನಪ್ರಲ್ಹಾದ ಜೋಶಿ: ಆಹಾರ ಮತ್ತು ಗ್ರಾಹಕ ವ್ಯವಹಾರ, ನವೀಕರಿಸಬಹುದಾದ ಇಂಧನಜುಯಲ್ ಓರಮ್: ಬುಡಕಟ್ಟು ಖಾತೆಗಿರಿರಾಜ್ ಸಿಂಗ್: ಜವಳಿಅಶ್ವಿನಿ ವೈಷ್ಣವ್: ರೈಲ್ವೇ , ಮಾಹಿತಿ ಮತ್ತು ಪ್ರಸಾರ, ಮಹಾತಿ ಮತ್ತು ತಂತ್ರಜ್ಞಾನಜ್ಯೋತಿರಾದಿತ್ಯ ಸಿಂಧಿಯಾ: ಟೆಲಿಕಾಂ ಖಾತೆಭೂಪೇಂದರ್ ಯಾದವ್: ಪರಿಸರಗಜೇಂದ್ರ ಸಿಂಗ್ ಶೇಖಾವತ್: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆಅನ್ನಪೂರ್ಣ ದೇವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಕಿರಣ್ ರಿಜಿಜು: ಸಂಸದೀಯ ವ್ಯವಹಾರಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂಡಾ. ಮನ್ಸುಖ್ ಮಾಂಡವಿಯಾ: ಕಾರ್ಮಿಕ, ಯುವಜನ ಮತ್ತು ಕ್ರೀಡಾ ಖಾತೆಜಿ. ಕಿಶನ್ ರೆಡ್ಡಿ: ಕಲ್ಲಿದ್ದಲು ಖಾತೆಚಿರಾಗ್ ಪಾಸ್ವಾನ್: ಆಹಾರ ಖಾತೆಆರ್ ಪಾಟೀಲ್: ಜಲ ಶಕ್ತಿ ಎನ್‌ಡಿಎ ಅಂದ್ರೆ ನರೇಂದ್ರ ಡಿಸ್ಟ್ರಕ್ಟಿವ್ ಅಲಯನ್ಸ್: ಕಾಂಗ್ರೆಸ್‌ನ ಜೈರಾಮ್ ರಮೇಶ್ ಟೀಕೆ ರಾಜ್ಯ ಖಾತೆ ಸಚಿವರು (ಸ್ವತಂತ್ರ ಉಸ್ತುವಾರಿ)ರಾವ್ ಇಂದ್ರಜಿತ್ ಸಿಂಗ್: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ರಾಜ್ಯ ಖಾತೆ, ಯೋಜನಾ ಖಾತೆಡಾ. ಜಿತೇಂದ್ರ ಸಿಂಗ್ : ವಿಜ್ಞಾನ ಹಾಗೂ ತಂತ್ರಜ್ಞಾನ ರಾಜ್ಯ ಖಾತೆಅರ್ಜುನ್ ರಾಮ್ ಮೇಘವಾಲ್: ಕಾನೂನು ಹಾಗೂ ನ್ಯಾಯ, ಸಂಸದೀಯ ವ್ಯವಾಹರಜಾಧವ ಪ್ರತಾಪ್ರಾವ್ ಗಣಪತರಾವ್:ಆಯುಷ್ ಹಾಗೂ ಆರೋಗ್ಯಜಯಂತ್ ಚೌಧರಿ: ಕೌಶಾಲ್ಯಾಭಿವೃದ್ಧಿ, ಶಿಕ್ಷಣ ರಾಜ್ಯ ಖಾತೆ ಸಚಿವರುಜಿತಿನ್ ಪ್ರಸಾದ್: ವಾಣಿಜ್ಯ ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನಶ್ರೀಪಾದ್ ನಾಯ್ಕ್:ಇಂಧನ, ನವೀಕರಿಸಬಹುದಾದ ಇಂಧನ ಖಾತೆಪಂಕಜ್ ಚೌಧರಿ: ಹಣಕಾಸುಕೃಷ್ಣ ಪಾಲ್: ವ್ಯವಾಹಾರರಾಮದಾಸ್ ಅಠವಳೆ: ಸಾಮಾಜಿಕ ನ್ಯಾಯರಾಮ್ ನಾಥ್ ಠಾಕೂರ್: ಕೃಷಿ ಹಾಗೂ ರೈತರ ಅಭಿವೃದ್ಧಿನಿತ್ಯಾನಂದ ರೈ: ಗೃಹ ಖಾತೆಅನುಪ್ರಿಯಾ ಪಟೇಲ್: ಆರೋಗ್ಯ ಹಾಗೂ ಕೌಟಿಂಬಿಕ ಕಲ್ಯಾಣ, ರಾಸಾಯನಿಕ ಹಾಗೂ ರಸಗೊಬ್ಬರವಿ.ಸೋಮಣ್ಣ:ಜಲ ಶಕ್ತಿ ಹಾಗೂ ರೈಲ್ವೇಚಂದ್ರಶೇಖರ್ ಪೆಮ್ಮಸಾನಿ: ಗ್ರಾಮೀಣ ಅಭಿವೃದ್ಧಿ, ಸಂವಹನಎಸ್.ಪಿ.ಸಿಂಗ್ ಬಘೇಲ್: ಮೀನುಗಾರಿಗೆ, ಪಶು ಸಂಗೋಪನೆಶೋಭಾ ಕರಂದ್ಲಾಜೆ: ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆ, ಕಾರ್ಮಿಕಕೀರ್ತಿವರ್ಧನ್ ಸಿಂಗ್: ಪರಿಸರ, ಹವಾಮಾನ ಬದಲಾವಣೆ, ವಿದೇಶಾಂಗ ಖಾತೆಬಿ ಎಲ್ ವರ್ಮಾ: ಆಹಾರ ನಾಗರೀಕರ ಸರಬರಾಜು, ವ್ಯವಹಾರ, ಸಾಮಾಜಿಕ ನ್ಯಾಯಶಂತನು ಠಾಕೂರ್: ಬಂದರು ಹಾಗೂ ಜಸಸಾರಿಗೆಸುರೇಶ್ ಗೋಪಿ: ಸಂಸ್ಕೃತಿ ಹಾಗೂ ಪ್ರವಾಸೋದ್ಯಮ, ಪೆಟ್ರೋಲಿಯಂ ಗ್ಯಾಸ್ಡಾ.ಎಲ್.ಮುರುಗನ್: ಮಾಹಿತಿ ಪ್ರಸಾರ, ಸಂಸದೀಯ ವ್ಯವಹಾರಅಜಯ್ ತಮ್ತಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆಬಂಡಿ ಸಂಜಯ್ ಕುಮಾರ್: ಹೋಮ್ ಅಫೈರ್ಸ್ಕಮಲೇಶ್ ಪಾಸ್ವಾನ್: ಗ್ರಾಮೀಣ ಅಭಿವೃದ್ಧಿಭಗೀರಥ ಚೌಧರಿ: ಕೃಷಿ , ರೈತ ಕಲ್ಯಾಣಸತೀಶ್ ಚಂದ್ರ ದುಬೆ: ಕಲ್ಲಿದ್ದಲ್ಲು ಗಣಿಸಂಜಯ್ ಸೇಠ್: ರಕ್ಷಣಾರವನೀತ್ ಸಿಂಗ್ : ರೈಲ್ವೇ, ಫುಡ್ ಪ್ರೊಸೆಸಿಂಗ್ದುರ್ಗಾದಾಸ್ ಯುಕೆ: ಬಡುಕಟ್ಟು ರಾಜ್ಯ ಖಾತೆರಕ್ಷಾ ನಿಖಿಲ್ ಖಡ್ಸೆ: ಯುವಜನ ಕ್ರೀಡಾ ಖಾತೆಸುಕಾಂತ ಮಜುಂದಾರ್: ಶಿಕ್ಷಣ, ಈಶಾನ್ಯ ರಾಜ್ಯ ಅಭಿವೃದ್ಧಿಸಾವಿತ್ರಿ ಠಾಕೂರ್: ಮಹಿಳಾ ಮತ್ತು ಮಕ್ಕಳ ಕಲ್ಯಾಣತೋಖಾನ್ ಸಾಹು: ವಸತಿರಾಜ್ ಭೂಷಣ ಚೌಧರಿ: ಜಲ ಶಕ್ತಿಭೂಪತಿ ರಾಜು ಶ್ರೀನಿವಾಸ ವರ್ಮ: ಉಕ್ಕು ಬೃಹತ್ ಕೈಗಾರಿಕೆಹರ್ಷ್ ಮಲ್ಹೋತ್ರಾ: ಸಾರಿಗೆ ಹೆದ್ದಾರಿ ರಾಜ್ಯ ಖಾತೆನಿಮುಬೇನ್ ಜಯಂತಿಭಾಯ್ ಬಮ್ಭಾನಿಯಾ: ಆಹಾರ ನಾಗರೀಕರ ಸರಬರಾಜುಮುರಳೀಧರ ಮೊಹೋಲ್: ವಿಮಾನಯಾನಜಾರ್ಜ್ ಕುರಿಯನ್: ಅಲ್ಪ ಸಂಖ್ಯಾತಪಬಿತ್ರಾ ಮಾರ್ಗರಿಟಾ: ಜವಳಿ, ವಿದೇಶಾಂಗ ರಾಜ್ಯ ಖಾತೆ