ನರೇಂದ್ರ ಮೋದಿ ಪ್ರಮಾಣವಚನಕ್ಕೆ ಇವರೆಲ್ಲಾ ಬರ್ತಾರೆ; ಇಲ್ಲಿದೆ ನೋಡಿ ಲಿಸ್ಟ್ ಜೂನ್ 8ರ ರಾತ್ರಿ 8 ಗಂಟೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದ್ದು, ನರೇಂದ್ರ ಮೋದಿ ( ) ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣಕ್ಕೂ ಮುನ್ನ ಇಂದು ಎನ್‌ಡಿಎ ಮೈತ್ರಿಕೂಟದ ಸದಸ್ಯರ ಸಭೆ ನಡೆಯಲಿದೆ. ನವದೆಹಲಿ:ನರೇಂದ್ರ ಮೋದಿ ಜೂನ್ 8ರಂದು ಪ್ರಮಾಣವಚನ ( ) ಸ್ವೀಕರಿಸೋದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ ಪ್ರಮಾಣವಚನ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ ( ) ಮತ್ತು ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರೆಂ ಸಿಂಘೆ ( ) ಅವರನ್ನು ಆಹ್ವಾನಿಸಲಾಗಿದೆ ಎಂದು ವರದಿ ಬಂದಿದೆ. ಭೂತಾನ್, ನೇಪಾಳ ಮತ್ತು ಮಾರ್ಷಿಯಸ್ ಪ್ರಧಾನಿಗಳನ್ನು ಸಹ ಆಹ್ವಾನಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಜೂನ್ 8ರ ರಾತ್ರಿ 8 ಗಂಟೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದ್ದು, ನರೇಂದ್ರ ಮೋದಿ ( ) ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣಕ್ಕೂ ಮುನ್ನ ಇಂದು ಎನ್‌ಡಿಎ ಮೈತ್ರಿಕೂಟದ ಸದಸ್ಯರ ಸಭೆ ನಡೆಯಲಿದೆ. ಬುಧವಾರ ಸ್ವತಃ ಹಂಗಾಮಿ ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಮಾಡಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರೆಂ ಸಿಂಘೆ ಅವರಿಗೆ ಆಹ್ವಾನಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ನರೇಂದ್ರ ಮೋದಿ ಕರೆ ಮಾಡಿ ಆಹ್ವಾನಿಸಿರೋದನ್ನು ಶ್ರೀಲಂಕಾದ ಪ್ರಧಾನಿ ಕಚೇರಿ ದೃಢಪಡಿಸಿದೆ. ಅದೇ ರೀತಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರಿಗೂ ಕರೆ ಮಾಡಿರುವ ನರೇಂದ್ರ ಮೋದಿ, ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವೇಳೆ ವಿಕಸಿತ ಭಾರತ-2047 ಮತ್ತು ಸ್ಮಾರ್ಟ್ ಬಾಂಗ್ಲಾದೇಶ-2047ಕ್ಕಾಗಿ ಜೊತೆಯಾಗಿ ಕೆಲಸ ಮಾಡುವ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಮೋದಿಯ ಅಜೇಯತೆ ದಿಢೀರ್‌ ಛಿದ್ರ ಎಂದು ಲೋಕಸಭೆ ಫಲಿತಾಂಶ ಬಣ್ಣಿಸಿದ ವಿದೇಶಿ ಮಾಧ್ಯಮಗಳು 2014 ಮತ್ತು 20196ರಲ್ಲಿ ಯಾರೆಲ್ಲಾ ಬಂದಿದ್ರು? 2019ರಲ್ಲಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪ್ರಧಾನಿಗಳನ್ನು ಆಹ್ವಾನಿಸಿತ್ತು. ಬಾಂಗ್ಲಾದೇಶ, ಭೂತಾನ್, ಭಾರತ, ಮಯನ್ಮಾರ್, ನೇಪಾಳ, ಶ್ರೀಲಾಂಕ ಮತ್ತು ಥೈಲ್ಯಾಂಡ್ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಈ ಎಲ್ಲಾ ನಾಯಕರು ಸೇರಿದಂತೆ 8 ಸಾವಿರ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. 2014ರಲ್ಲಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗಿತ್ತು. ಅಂದಿನ ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಹ ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ಕಾರ ರಚನೆಯಿಂದ ಹೆಜ್ಜೆ ಹಿಂದಿಟ್ಟ ಐಎನ್‌ಡಿಐಎ ಕೂಟ; ಖರ್ಗೆ ಅಚ್ಚರಿಯ ಹೇಳಿಕೆ ಇಂದು ಅನೇಕ ಗಣ್ಯರಿಗೆ ಆಹ್ವಾನ ಕಳುಹಿಸುವ ಸಾಧ್ಯತೆ ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರನ್ನು ಸಹ ಪದಗ್ರಹಣ ಕಾರ್ಯಕ್ರಮ ಆಹ್ವಾನಿಸುವ ಸಾಧ್ಯತೆ ಇದೆ. ಇನ್ನುಳಿದಂತೆ ವಿದೇಶಿ ಗಣ್ಯರಿಗೆ ಇಂದು ಆಹ್ವಾನ ಕಳುಹಿಸುವ ಸಾಧ್ಯತೆ ಇದೆ. 2019 ರಲ್ಲಿ ನರೇಂದ್ರ ಮೋದಿಯವರೊಂದಿಗೆ 24 ಕೇಂದ್ರ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಬಾರಿ ಮೋದಿ 3.0 ಕ್ಯಾಬಿನೆಟ್‌ನಲ್ಲಿ ಮಿತ್ರ ಪಕ್ಷಗಳು ಪ್ರಾಬಲ್ಯ ಹೊಂದುವ ಸಾಧ್ಯತೆಗಳಿವೆ. ಈ ಬಾರಿ ಬಿಜೆಪಿಗೆ ಮ್ಯಾಜಿಕ್ ನಂಬರ್ ಸಿಗದ ಕಾರಣ, ಮಿತ್ರಪಕ್ಷಗಳ ವಿಶ್ವಾಸವನ್ನು ಕಾಯ್ದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.