ಚಿಂದಿ ಆಯುವ ರಾಯಚೂರು ಬಾಲಕನಿಂದ ರಾಷ್ಟ್ರಗೀತೆಗೆ ಗೌರವ, ವಿಡಿಯೋ ವೈರಲ್ ರಾಯಚೂರಿನಲ್ಲಿ ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಚಿಂದಿ ಆಯುವ ಬಾಲಕ ನಿಂತು ಗೌರವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದೇವದುರ್ಗ (ಮೇ.30):ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಚಿಂದಿ ಆಯುವ ಬಾಲಕ ನಿಂತು ಗೌರವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಾಲೂಕಿನ ಮಸರಕಲ್‌ ಗ್ರಾಮದ ಸಂತೋಷ ಎನ್ನುವ ಬಾಲಕ ಚಿಂದಿ ಆಯುತ್ತಿದ್ದ ಸಮಯದಲ್ಲಿ ಸಮೀಪದ ಶಾಲಾ ಆವರಣದಲ್ಲಿ ರಾಷ್ಟ್ರಗೀತೆ ಆರಂಭಗೊಂಡಿದ್ದು ತಕ್ಷಣ ಈ ಬಾಲಕ ಕೈಯಲ್ಲಿದ್ದ ತುಂಬಿದ ಚೀಲ ಕಳೆಗಡೆ ಇಟ್ಟು ರಾಷ್ಟ್ರಗೀತೆ ಮುಗಿಯುವ ತನಕ ಮೌನವಾಗಿ ನಿಂತು ಗೌರವ ಸಲ್ಲಿಸಿದ್ದು, ಈ ವಿಡಿಯೋ ವೈರಲ್‌ಗೊಂಡಿದ್ದು ಚಿಂದಿ ಆಯುವ ಬಾಲಕನ ರಾಷ್ಟ್ರ ಪ್ರೇಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (@)