ಉತ್ತರ ಭಾರತದ ಕಾಶಿಯಲ್ಲಿ ಅನಾಥವಾಗಿ ಬಿದ್ದಿದ್ದ ಕನ್ನಡ ಶಾಸನಕ್ಕೆ ಸಿಕ್ತು ಮುಕ್ತಿ..! ಕಾಶಿಯಲ್ಲಿ ಅನಾಥವಾಗಿ ಬಿದ್ದಿದ್ದ ಕನ್ನಡದ ಶಾಸನಕ್ಕೆ ಸಿಕ್ತು ಮುಕ್ತಿ..!ಕಾಲು ಸಂಕವಾಗಿ ಬಿದ್ದಿದ್ದ ಶಿಲಾಶಾಸನ ವ್ಯವಸ್ಥಿತವಾಗಿ ಸ್ಥಾಪನೆ..!ಕಪಿಲದಾರ ಸರೋವರದ ಬಳಿ ಪತ್ತೆಯಾಗಿತ್ತು ಕನ್ನಡದ ಶಾಸನ..! ಉತ್ತರ ಭಾರತದ ಕಾಶಿಯಲ್ಲಿ() ಅನಾಥವಾಗಿ ಬಿದ್ದಿದ್ದ ಕನ್ನಡದ ಶಾಸನಕ್ಕೆ( ) ಕೊನೆಗೂ ಮುಕ್ತಿ ಸಿಕ್ಕಿದ್ದು, ಕಾಲುಸಂಕವಾಗಿ() ಬಿದ್ದಿದ್ದ ಶಿಲಾಶಾಸನ ವ್ಯವಸ್ಥಿತವಾಗಿ ಸ್ಥಾಪನೆಗೊಂಡಿದೆ. ಇದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್‌ ಆಗಿದೆ. ಕಾಶಿಯ ಕಪಿಲದಾರ ಸರೋವರದ ಬಳಿ ಕನ್ನಡದ ಶಾಸನ ಪತ್ತೆಯಾಗಿದ್ದು, ಕೆಳದಿಯ ಶಿವಪ್ಪನಾಯಕನ ಕಾಲದ ಶಾಸನ ಇದಾಗಿದೆ. ಕಾಶಿ ಪಟ್ಟಣದಲ್ಲಿ ಪತ್ತೆಯಾಗಿದ್ದ( ) ಕೆಳದಿಯ ಶಿವಪ್ಪನಾಯಕನ ಕಾಲದ ನಡೆದಾಡುವ ಕಾಲು ಸಂಕವಾಗಿ ಅನಾಥ ಸ್ಥಿತಿಯಲ್ಲಿತ್ತು. ಶಿಲಾ ಶಾಸನದ ಮೇಲೆ ಶಿವಪ್ಪ ನಾಯಕನ ಕಾಲದ ಕನ್ನಡದ ಬರಹವಿತ್ತು. ಕಪಿಲ ಸರೋವರದಲ್ಲಿ ಈ ಶಾಸನ ಅನಾಥವಾಗಿ ಬಿದ್ದಿದ್ದು ಒಡಾಡುವ ಸಂಕವಾಗಿ ಬಳಕೆಯಾಗುತ್ತಿದ್ದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ವಿಸ್ತೃತವಾಗಿ ವರದಿ ಬಿತ್ತರ ಮಾಡಿತ್ತು. ಕರ್ನಾಟಕ ಸರ್ಕಾರ ಇದರ ಸಂರಕ್ಷಣೆ ಮಾಡಲು ಕನ್ನಡಿಗ ವಕೀಲ ಪ್ರವೀಣ್ ಸಾಗರ್ ಆಗ್ರಹಿಸಿದ್ದರು. ಏಷ್ಯಾನೆಟ್‌ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಶಿಲಾ ಶಾಸನ ವ್ಯವಸ್ಥಿತವಾಗಿ ಕಾಶಿ ಜಗದ್ಗುರುಗಳು( ) ಸ್ಥಾಪನೆ ಮಾಡಿಸಿದ್ದಾರೆ.ಕಾಶಿಯ ಜಂಗಮವಾಡಿ ಮಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು, ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಇದರ ಸ್ತಾಪನೆ ಮಾಡಿಸಿದ್ದಾರೆ. ಕಾಶಿಯ ಜಗದ್ಗುರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಠದ ಸಿಬ್ಬಂದಿಗಳು ವ್ಯವಸ್ಥಿತವಾಗಿ ಶಿಲ ಶಾಸನವನ್ನು ಸ್ಥಾಪನೆ ಮಾಡಿದ್ದಾರೆ. ಕೊನೆಗೂ ಶಿವಪ್ಪನಾಯಕನ ಶಾಸನಕ್ಕೆ ಕಾಶಿಯಲ್ಲಿ ಸೂಕ್ತ ನೆಲೆ ಸಿಕ್ಕಿದೆ. ಕಾಲುಸಂಕವಾಗಿ ಜನರು ನಡೆದಾಡುತ್ತಿದ್ದ ಶಿಲಾಶಾಸನ ಇದೀಗ ಸೂಕ್ತ ಸ್ಥಳದಲ್ಲಿ ಸ್ಥಾಪಿಸಿ ಸ್ವಚ್ಛಗೊಳಿಸಲಾಗಿದೆ. ಕೆಳದಿ ಸಾಮ್ರಾಜ್ಯದ ಮೊದಲ ಆಡಳಿತಗಾರ ಚೌಡಪ್ಪ ನಾಯಕ, ಕ್ರಿ.ಶ 1499 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕೆಳದಿ ರಾಜರು ಆಳ್ವಿಕೆ ಆರಂಭ ಮಾಡಿದ್ದರು. ನಂತರ ಕ್ರಿ.ಶ.1565ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದಾಗ ಕೆಳದಿ ಅರಸರು ಸ್ವಾತಂತ್ರ್ಯ ಪಡೆದರು. ಈ ಸಾಮ್ರಾಜ್ಯದ ಪ್ರಮುಖ ಆಡಳಿತಗಾರರು ಹಿರಿಯ ವೆಂಕಟಪ್ಪ ನಾಯಕ, ಶಿವಪ್ಪ ನಾಯಕ ಮತ್ತು ಕೆಳದಿ ಚೆನ್ನಮ್ಮ, 1763 ರಲ್ಲಿ ಹೈದರ್ ಅಲಿ ಕೆಳದಿಯನ್ನು ಸೋಲಿಸಿದಾಗ ಅವರ ಆಳ್ವಿಕೆ ಕೊನೆಗೊಂಡಿತ್ತು.ಇದನ್ನೂ ವೀಕ್ಷಿಸಿ:ಹೀಗ್ಯಾಕಾದ ಹಾರ್ದಿಕ್ ಪಾಂಡ್ಯ..? ಮುರಿದು ಬಿತ್ತಾ ಟೀಮ್ ಇಂಡಿಯಾ ಕ್ರಿಕೆಟಿಗನ 4 ವರ್ಷಗಳ ದಾಂಪತ್ಯ..? ಉತ್ತರ ಭಾರತದ ಕಾಶಿಯಲ್ಲಿ() ಅನಾಥವಾಗಿ ಬಿದ್ದಿದ್ದ ಕನ್ನಡದ ಶಾಸನಕ್ಕೆ( ) ಕೊನೆಗೂ ಮುಕ್ತಿ ಸಿಕ್ಕಿದ್ದು, ಕಾಲುಸಂಕವಾಗಿ() ಬಿದ್ದಿದ್ದ ಶಿಲಾಶಾಸನ ವ್ಯವಸ್ಥಿತವಾಗಿ ಸ್ಥಾಪನೆಗೊಂಡಿದೆ. ಇದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ ಇಂಪ್ಯಾಕ್ಟ್‌ ಆಗಿದೆ. ಕಾಶಿಯ ಕಪಿಲದಾರ ಸರೋವರದ ಬಳಿ ಕನ್ನಡದ ಶಾಸನ ಪತ್ತೆಯಾಗಿದ್ದು, ಕೆಳದಿಯ ಶಿವಪ್ಪನಾಯಕನ ಕಾಲದ ಶಾಸನ ಇದಾಗಿದೆ. ಕಾಶಿ ಪಟ್ಟಣದಲ್ಲಿ ಪತ್ತೆಯಾಗಿದ್ದ( ) ಕೆಳದಿಯ ಶಿವಪ್ಪನಾಯಕನ ಕಾಲದ ನಡೆದಾಡುವ ಕಾಲು ಸಂಕವಾಗಿ ಅನಾಥ ಸ್ಥಿತಿಯಲ್ಲಿತ್ತು. ಶಿಲಾ ಶಾಸನದ ಮೇಲೆ ಶಿವಪ್ಪ ನಾಯಕನ ಕಾಲದ ಕನ್ನಡದ ಬರಹವಿತ್ತು. ಕಪಿಲ ಸರೋವರದಲ್ಲಿ ಈ ಶಾಸನ ಅನಾಥವಾಗಿ ಬಿದ್ದಿದ್ದು ಒಡಾಡುವ ಸಂಕವಾಗಿ ಬಳಕೆಯಾಗುತ್ತಿದ್ದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ವಿಸ್ತೃತವಾಗಿ ವರದಿ ಬಿತ್ತರ ಮಾಡಿತ್ತು. ಕರ್ನಾಟಕ ಸರ್ಕಾರ ಇದರ ಸಂರಕ್ಷಣೆ ಮಾಡಲು ಕನ್ನಡಿಗ ವಕೀಲ ಪ್ರವೀಣ್ ಸಾಗರ್ ಆಗ್ರಹಿಸಿದ್ದರು. ಏಷ್ಯಾನೆಟ್‌ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಶಿಲಾ ಶಾಸನ ವ್ಯವಸ್ಥಿತವಾಗಿ ಕಾಶಿ ಜಗದ್ಗುರುಗಳು( ) ಸ್ಥಾಪನೆ ಮಾಡಿಸಿದ್ದಾರೆ. ಕಾಶಿಯ ಜಂಗಮವಾಡಿ ಮಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರು, ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಇದರ ಸ್ತಾಪನೆ ಮಾಡಿಸಿದ್ದಾರೆ. ಕಾಶಿಯ ಜಗದ್ಗುರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಠದ ಸಿಬ್ಬಂದಿಗಳು ವ್ಯವಸ್ಥಿತವಾಗಿ ಶಿಲ ಶಾಸನವನ್ನು ಸ್ಥಾಪನೆ ಮಾಡಿದ್ದಾರೆ. ಕೊನೆಗೂ ಶಿವಪ್ಪನಾಯಕನ ಶಾಸನಕ್ಕೆ ಕಾಶಿಯಲ್ಲಿ ಸೂಕ್ತ ನೆಲೆ ಸಿಕ್ಕಿದೆ. ಕಾಲುಸಂಕವಾಗಿ ಜನರು ನಡೆದಾಡುತ್ತಿದ್ದ ಶಿಲಾಶಾಸನ ಇದೀಗ ಸೂಕ್ತ ಸ್ಥಳದಲ್ಲಿ ಸ್ಥಾಪಿಸಿ ಸ್ವಚ್ಛಗೊಳಿಸಲಾಗಿದೆ. ಕೆಳದಿ ಸಾಮ್ರಾಜ್ಯದ ಮೊದಲ ಆಡಳಿತಗಾರ ಚೌಡಪ್ಪ ನಾಯಕ, ಕ್ರಿ.ಶ 1499 ರಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕೆಳದಿ ರಾಜರು ಆಳ್ವಿಕೆ ಆರಂಭ ಮಾಡಿದ್ದರು. ನಂತರ ಕ್ರಿ.ಶ.1565ರಲ್ಲಿ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾದಾಗ ಕೆಳದಿ ಅರಸರು ಸ್ವಾತಂತ್ರ್ಯ ಪಡೆದರು. ಈ ಸಾಮ್ರಾಜ್ಯದ ಪ್ರಮುಖ ಆಡಳಿತಗಾರರು ಹಿರಿಯ ವೆಂಕಟಪ್ಪ ನಾಯಕ, ಶಿವಪ್ಪ ನಾಯಕ ಮತ್ತು ಕೆಳದಿ ಚೆನ್ನಮ್ಮ, 1763 ರಲ್ಲಿ ಹೈದರ್ ಅಲಿ ಕೆಳದಿಯನ್ನು ಸೋಲಿಸಿದಾಗ ಅವರ ಆಳ್ವಿಕೆ ಕೊನೆಗೊಂಡಿತ್ತು. ಇದನ್ನೂ ವೀಕ್ಷಿಸಿ:ಹೀಗ್ಯಾಕಾದ ಹಾರ್ದಿಕ್ ಪಾಂಡ್ಯ..? ಮುರಿದು ಬಿತ್ತಾ ಟೀಮ್ ಇಂಡಿಯಾ ಕ್ರಿಕೆಟಿಗನ 4 ವರ್ಷಗಳ ದಾಂಪತ್ಯ..?