ಇವನೆಂಥಾ ಕಟುಕ, ಹೆಂಡತಿ ಕತ್ತು ತುಂಡರಿಸಿ ಕೋಳಿಯಂತೆ ಚರ್ಮ ಸುಲಿದ ಪತಿ! ಇದು ದೆಹಲಿಗಿಂತಲೂ ಭೀಭತ್ಸವಾದ ಕೊಲೆ. ಪೊಲೀಸರು ಕೊಲೆ ನಡೆದ ಜಾಗಕ್ಕೆ ಹೋದಾಗ ರಕ್ತದ ಕೋಡಿ ಹರಿದು ಮನೆಯೆಲ್ಲ ಕೆಂಪಗಾಗಿತ್ತು. ಕೊಲೆ ನಡೆದ ಜಾಗದಲ್ಲಿ ತಲೆ ಮಾತ್ರ ಕಾಣುತ್ತಿತ್ತು. ದೇಹಕ್ಕಾಗಿ ಪೊಲೀಸರು ಹುಡುಕಿದಾಗ ಗುರುತೇ ಸಿಗಂದಂತೆ ಚರ್ಮವನ್ನು ಸುಲಿದು ಇಟ್ಟಿದ್ದ ಆ ಕೊಲೆಗಾರ. ತುಮಕೂರು (ಮೇ.28):ಇದು ದೆಹಲಿಗಿಂತಲೂ ಭೀಭತ್ಸವಾದ ಕೊಲೆ. ನಡೆದಿದ್ದು ತುಮಕೂರಿನಲ್ಲಿ. ಪೊಲೀಸರು ಕೊಲೆ ನಡೆದ ಜಾಗಕ್ಕೆ ಹೋದಾಗ ರಕ್ತದ ಕೋಡಿ ಹರಿದು ಮನೆಯೆಲ್ಲ ಕೆಂಪಗಾಗಿತ್ತು. ಕೊಲೆ ನಡೆದ ಜಾಗದಲ್ಲಿ ತಲೆ ಮಾತ್ರ ಕಾಣುತ್ತಿತ್ತು. ದೇಹಕ್ಕಾಗಿ ಪೊಲೀಸರು ಹುಡುಕಿದಾಗ ಗುರುತೇ ಸಿಗಂದಂತೆ ಆಗಿದ ಆ ದೇಹದಲ್ಲಿ ಅಂಗಾಗಲೇ ಇರಲಿಲ್ಲ. ವೈದ್ಯರ ಪ್ರಯೋಗಾಲಯದಲ್ಲಿ ಸತ್ತ ಹೆಣವನ್ನು ಯಾವ ರೀತಿಯಲ್ಲಿ ಪರೀಕ್ಷೆ ನಡೆಸುತ್ತಾರೋ ಅದಕ್ಕಿಂತಲೂ ಭೀಕರವಾಗಿ ದೇಹವನ್ನು ಸ್ಕಿನ್‌ ಔಟ್‌ ಮಾಡಿದ್ದ ಪಾಪಿ. ಕೊಲೆಗಾರನ ವಿಕೃತಿಗೆ ಪೊಲೀಸರೇ ಬೆಚ್ಚಿಬಿದ್ದಿದ್ದರು. ಇಲ್ಲಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ ಭೀಕರ ಕೊಲೆಯೊಂದು ನಡೆದಿದೆ. ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ ನಡೆದಿದ್ದು, ಕತ್ತು ಹಾಗೂ ದೇಹದ ಅಂಗಾಂಗಗಳನ್ನ ಕತ್ತರಿಸಿ ಚರ್ಮ ಸುಲಿದು ಭೀಭತ್ಸವಾಗಿ ಹತ್ಯೆ ಮಾಡಲಾಗಿದೆ. ಪುಷ್ಪ(32), ಮೃತ ದುರ್ದೈವಿಯಾಗಿದ್ದಾಳೆ. ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾಗಿದ್ದ ಶಿವರಾಮ್, ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಪ್ಪಳನ್ನ ಮದುವೆಯಾಗಿದ್ದ. ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವರಾಮ್, ಮರದ ಮಿಲ್ ವೊಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡ್ತಿದ್ದ. ಬೆಂಗಳೂರು: ರೇವ್‌ ಪಾರ್ಟಿಯ ವಿಚಾರಣೆಗೆ ಬರಲು ಕಾಲಾವಕಾಶ ಕೇಳಿದ ಚಿತ್ರ ನಟಿಯರು ಕ್ಷುಲ್ಲಕ ಕಾರಣಕ್ಕೆ ಪತಿ ಹಾಗೂ ಪತ್ನಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತಂತೆ. ನಿನ್ನೆ ರಾತ್ರಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನ ಭೀಕರವಾಗಿ ಶಿವರಾಮ್ ಕೊಲೆ ಮಾಡಿದ್ದಾನೆ. ಪ್ರಜ್ವಲ್ ರೇವಣ್ಣ ತಾನೇ ಶರಣಾದರೂ, ಪೊಲೀಸರೇ ಕರೆತಂದರೂ ಅರೆಸ್ಟ್ ಆಗುವುದು ಖಚಿತ; ಗೃಹ ಸಚಿವ ಪರಮೇಶ್ವರ ತಾವು ವಾಸವಿದ್ದ ಅಡುಗೆ ಮನೆಯಲ್ಲೇ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ವಿಕಾರವಾಗಿ ಕೊಂಡಿದ್ದಾನೆ. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕೊಲೆಗೈದ ಪತಿ ಶಿವರಾಮ್ ನನ್ನ ಬಂಧಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.