ಕೆಲಸ ಕೇಳಿ ಬಂದ ಯುವತಿ ಜೊತೆ ಆಪ್ ಸಚಿವನ ಅಶ್ಲೀಲ ವಿಡಿಯೋ ಲೀಕ್, ಅಮಾನತಿಗೆ ಬಿಜೆಪಿ ಆಗ್ರಹ! ಆಮ್ ಆದ್ಮಿ ಪಾರ್ಟಿ ಸಂಕಷ್ಟ ಹೆಚ್ಚಾಗುತ್ತಿದೆ. ಇದೀಗ ಆಪ್ ಸಚಿವನ ಅಶ್ಲೀಲ ವಿಡಿಯೋ ಬಹಿರಂಗಗೊಂಡಿದೆ. ಈ ಸಚಿವನ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ನಾಯಕ, ತಕ್ಷಣವೇ ಅಮಾನತಿಗೆ ಆಗ್ರಹಿಸಿದ್ದಾರೆ. ನವದೆಹಲಿ(ಮೇ.27) ಆಮ್ ಆದ್ಮಿ ಪಾರ್ಟಿ ಒಬ್ಬೊಬ್ಬ ನಾಯಕರು ಜೈಲು-ಕಾನೂನು ಹೋರಾಟದಲ್ಲೇ ಮುಳುಗಿದ್ದರೆ, ಇತ್ತ ಪಂಜಾಬ್ ಆಪ್ ಸಚಿವನ ಕಾಮಕಾಂಡ ವಿಡಿಯೋ ಹೊರಬಂದಿದೆ. ಕೆಲಸ ಕೇಳಿ ಸಚಿವನ ಬಳಿ ಬಂದ ಯುವತಿ ಜೊತೆ ಅಸಭ್ಯವಾಗಿ ನಡೆದುಕೊಂಡಿರುವ ವಿಡಿಯೋವನ್ನು ಬಿಜೆಪಿ ನಾಯಕ ತಜಿಂದರ್ ಬಗ್ಗಾ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ, ಇಷ್ಟೇ ಅಲ್ಲ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ. ಇತ್ತ ಬಿಜೆಪಿ ವಿಡಿಯೋ ಹಂಚಿಕೊಂಡು ತಕ್ಷಣವೇ ಸಚಿವರನ್ನು ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. 21 ವರ್ಷದ ಯುವತಿ ಕೆಲಸ ಕೇಳಿಕೊಂಡು ಪಂಜಾಬ್ ಆಪ್ ಸಚಿವ ಬಾಲ್ಕಾರ್ ಸಿಂಗ್ ಬಳಿ ಬಂದಿದ್ದಾರೆ. ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ ಪಂಜಾಬ್ ಆಪ್ ಸಚಿವ, ಒಂದೆಡೆ ಬಾರಿ ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಯುವತಿಗೆ ವಿಡಿಯೋ ಕಾಲ್ ಮಾಡಿದ ಸಚಿವ ಬಾಲ್ಕರ್ ಸಿಂಗ್ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಯುವತಿ ಎದುರೇ ಪ್ಯಾಂಟ್ ಬಿಚ್ಚಿದ ಸಚಿವ, ಹಸ್ತಮೈಥುನ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ ಯುವತಿಗೂ ಬಟ್ಟೆ ಬಿಚ್ಚಿ ನಿಲ್ಲುವಂತೆ ಸೂಚಿಸಿದ್ದಾರೆ. ಕೇಜ್ರಿವಾಲ್ ಆಪ್ತನಿಂದ ಹಲ್ಲೆಗೊಳಗಾದ ಸಂಸದೆ ಸ್ವಾತಿ ದಾಖಲಿಸಿದ್ದ ದೂರಿನ ವಿವರ ಬಹಿರಂಗ ಯುವತಿ ಜೊತೆಗಿನ ಸಂಭಾಷಣೆ ಹಾಗೂ ಹಸ್ತಮೈಥುನದ ವಿಡಿಯೋವನ್ನು ಬಿಜೆಪಿ ನಾಯಕ ತಜೀಂದರ್ ಬಗ್ಗಾ ಹಂಚಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಚಿವರ ಒತ್ತಡಕ್ಕೆ ಮಣಿಸಿ ನಗ್ನವಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇತ್ತ ಆಪ್ ಸಚಿವ ಆಕೆಯನ್ನೂ ವಿವಸ್ತ್ರಗೊಳಿಸಿ, ತಾನು ವಿವಸ್ತ್ರಗೊಂಡು ಹಸ್ತಮೈಥುನ ಮಾಡಿಕೊಂಡಿದ್ದಾರೆ. = , 21- & ? …../SgGM6E2oCd ಆಪ್ ಸಚಿವ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ಬಿಜೆಪಿ ಸಚಿವನ ವಿರುದ್ದ ಕ್ರಮಕ್ಕೆ ಆಗ್ರಹಿಸಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ, ಆಪ್ , ಕಾಂಗ್ರಸ್ ಇದೀಗ ಸೈಲೆಂಟ್ ಆಗಿದೆ. ಸಚಿವನ ವಿರುದ್ಧ ಪಂಜಾಬ್ ಆಪ್ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎಂದು ಪ್ರಶ್ನಿಸಿದೆ. ಆಪರೇಷನ್ ಬ್ಲಾಕ್ ಡಾಲರ್ ಸುಳಿಯಲ್ಲಿ ಕೇಜ್ರಿವಾಲ್? ಮತ್ತೆ ಜೈಲು ಸೇರ್ತಾರಾ ಸಿಎಂ? ಆಪ್ ಸಚಿವನ ಕಾಮಕಾಂಡ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಪಂಜಾಬ್ ಆಪ್ ಸರ್ಕಾರ ಮಾತ್ರವಲ್ಲ, ದೆಹಲಿ ಆಪ್ ಸರ್ಕಾರದ ಸಂಕಷ್ಟವೂ ಹೆಚ್ಚಾಗಿದೆ. ಈಗಾಗಲೇ ದೆಹಲಿ ಆಪ್ ಸರ್ಕಾರದ ನಾಯಕರು ಒಬ್ಬರ ಹಿಂದೆ ಒಬ್ಬರು ಅಬಕಾರಿ ಹಗರಣದಲ್ಲಿ ಸಿಲುಕಿ ಒದ್ದಾಡುತ್ತಿರುವ ಬೆನ್ನಲ್ಲೇ ಈ ವಿಡಿಯೋ ಆಪ್ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ. ಇತ್ತ ದೆಹಲಿ ಆಪ್ ಸರ್ಕಾರಕೂಡ ಸಂಕಷ್ಟಕ್ಕೆ ಸಿಲುಕಿದೆ.