ಕರ್ನಾಟಕ ಸರ್ಕಾರದ ಹೊರ ಗುತ್ತಿಗೆ ನೌಕರಿಗೂ ಮೀಸಲಾತಿ ಅನ್ವಯ; ಮಹಿಳೆಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದ ಎಲ್ಲ ಹೊರಗುತ್ತಿಗೆ ಉದ್ಯೋಗಗಳನ್ನು ಕಡ್ಡಾಯವಾಗಿ ಮೀಸಲಾತಿ ಅನ್ವಯವೇ ನೇಮಕ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರು (ಮೇ 20):ರಾಜ್ಯ ಸರ್ಕಾರದ ಕಛೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳುವುದು ಸರ್ಕಾರದ ಇತ್ತೀಚಿನ ಅಂಗೀಕೃತ ಕಾರ್ಯ ನೀತಿಯಾಗಿರುತ್ತದೆ. ಆದರೆ, ಇನ್ನುಮುಂದೆ ಎಲ್ಲ ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ 2023ರ ಡಿಸೆಂಬರ್ ತಿಂಗಳಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ನಿರ್ಣಯಿಸಲಾಗಿದೆ. ಆದುದರಿಂದ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುವ ಎಲ್ಲಾ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಈ ಕೆಳಕಂಡ ಸೂಚನೆಗಳೊಂದಿಗೆ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಗೃಹ ಸಚಿವರ ತವರಲ್ಲಿ ಕಳ್ಳರಿಗೆ ವಿಶೇಷ ನೌಕರಿ; ಕಳ್ಳತನ ಉದ್ಯೋಗಕ್ಕೆ ಮಾಸಿಕ 20 ಸಾವಿರ ರೂ. ಸಂಬಳ ವಿರಾಟ್ ಕೊಹ್ಲಿಗೆ ರಕ್ತದಲ್ಲಿ ಬಿಡಿಸಿದ ಭಾವಚಿತ್ರ ಅರ್ಪಿಸಿದ ಚಿತ್ರಕಲಾ ಶಿಕ್ಷಕ