ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುವುದಾಗಿ ಹೇಳಿದ್ದ ಯುವಕನ್ನು ಬಂಧಿಸಿದ ಪೊಲೀಸರು ಬೆಂಗಳೂರಿನಲ್ಲಿ ನಡೆಯುವ ಆರ್‌ಸಿಬಿ ಸಿಎಸ್‌ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ನುಗ್ಗುವುದಾಗಿ ಹೇಳಿದ್ದ ಯುವಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು (ಮೇ 18):ಇಂಡಿಯನ್ ಪ್ರೀಯಮಿರ್ ಲೀಗ್ 2024ರ ( 2024) ಪ್ರಮುಖ ಪಂದ್ಯಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು () ಹಾಗೂ ಚೆನ್ನೈ ಸೂಪರ್ ಕಿಂಗ್ಸ್ () ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗುವುದಾಗಿ ಹೇಳಿ ವಿಡಿಯೋ ಹಂಚಿಕೊಂಡಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಈ ಹಿಂದೆ ನಡೆಸಿದ್ದ ಐಪಿಎಲ್ ಪಂದ್ಯದ ( ) ವೇಳೆ ಉತ್ತರ ಕರ್ನಾಟಕದ ಒಬ್ಬ ಯುವಕ ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ನುಗ್ಗಿ ವಿರಾಟ್ ಕೊಹ್ಲಿ ( ) ಕಾಲಿಗೆ ಬಿದ್ದು, ಅಪ್ಪಿಕೊಂಡು ಬಂದಿದ್ದನು. ಇದರಿಂದ ಪ್ರೇರಣೆಗೊಂಡ ಬೆಂಗಳೂರಿನ ಯುವಕ ( ) ಕೂಡ ತಾನು ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ( ) ವೇಳೆ ಮೈದಾನಕ್ಕೆ ನುಗ್ಗುತ್ತೇನೆ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದನು. ಆದರೆ, ಇದರಿಂದ ಪಂದ್ಯಾಟಕ್ಕೆ ಸಮಸ್ಯೆ ಆಗಬಹುದು ಎಂದು ಚಿನ್ನಸ್ವಾಮಿ ಕ್ರೀಡಾಂಗಣದ ( ) ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಚೆನ್ನೈ ಎದುರಿನ ಬಿಗ್‌ ಮ್ಯಾಚ್‌ನಲ್ಲಿ ಕೈಹಿಡಿತಾರಾ ದಿನೇಶ್ ಕಾರ್ತಿಕ್..? ಡಿಕೆ ಅಬ್ಬರಿಸಿದ್ರೆ ಗೆಲುವು ಫಿಕ್ಸ್ ಈ ಬಗ್ಗೆ ಪೊಲೀಸರು ಕೂಡ ನಿಗಾವಹಿಸಿ ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗುವುದಾಗಿ ವಿಡಿಯೋ ಶೇರ್ ಮಾಡಿಕೊಂಡಿದ್ದ ಯುವಕ ಟಿಕೆಟ್ ಪಡೆದು ಪಂದ್ಯವನ್ನು ನೋಡಲು ಆಗಮಿಸಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ( ) ಮಾಡಿಕೊಂಡ ಯುವಕನನ್ನು ನಿತಿನ್ (24) ಎಂದು ಗುರುತಿಸಲಾಗಿದೆ. ಈತನ ವೀಡಿಯೋ ವೈರಲ್ ಆಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಬ್ಬನ್ ಪಾರ್ಕ್‌ ಠಾಣೆಯ ( ) ಪೊಲೀಸರು ನಿತಿನ್‌ನನ್ನು ವಶಕ್ಕೆ ಪಡೆದಿದ್ದಾರೆ. (@)