ಹಾಸನದಲ್ಲಿ ಮಿತಿಮೀರಿದ ಪುಂಡರ ಹಾವಳಿ; ಮದ್ಯ ಸೇವಿಸಿ ಬಾಲಕಿ ಜೊತೆ ಅನುಚಿತ ವರ್ತನೆ! ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಮಾದಕ ವ್ಯಸನಿಯೊಬ್ಬ ಏಕಾಏಕಿ ಅಡ್ಡ ಹಾಕಿ ಆಕೆಯ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ (ಮೇ.16):ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಮಾದಕ ವ್ಯಸನಿಯೊಬ್ಬ ಏಕಾಏಕಿ ಅಡ್ಡ ಹಾಕಿ ಆಕೆಯ ಜತೆ ಅನುಚಿತವಾಗಿ ವರ್ತಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಬಾಲಕಿಗೆ ಅಡ್ಡಬಂದ ದುಷ್ಕರ್ಮಿ. ಅನುಚಿತವಾಗಿ ವರ್ತಿಸಿದ್ದಲ್ಲದೇ ಬಲವಂತ ಮಾಡಿದ್ದನೆ ಆಗ ಬಾಲಕಿ ವಿರೋಧ ವ್ಯಕ್ತಪಡಿಸಿದ್ದಾಳೆ. ಬಾಲಕಿಗೆ ಥಳಿಸಿರುವ ದುಷ್ಕರ್ಮಿ ಈ ವೇಳೆ ಸುತ್ತಮುತ್ತ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆತನನ್ನು ಹಿಡಿಯಲು ಮುಂದಾದಾಗ ಪರಾರಿಯಾಗಿದ್ದಾನೆ. ಮಂಗಳವಾರ ರಾತ್ರಿ 8 ಗಂಟೆಯ ನಡೆದಿರುವ ಘಟನೆ. ಲೈಂಗಿಕ ದೌರ್ಜನ್ಯ ಆರೋಪ: ಭಾರತಕ್ಕೆ ಬರದೆ ಕೈಕೊಟ್ಟ ಪ್ರಜ್ವಲ್‌..! ಅಂಗಡಿ ಮಾಲೀಕನೋರ್ವ ಮಾಧ್ಯಮದೊಂದಿಗೆ ಮಾತನಾಡಿ, ಮಂಗಳವಾರ ಸಂಜೆ ಸುಮಾರು 7.30ರ ಗಂಟೆಯ ಸಮಯ ಕಟ್ಟಿನಕೆರೆ ಮಾರುಕಟ್ಟೆ ಪಿಕ್ಚರ್ ಪ್ಯಾಲೇಸ್ ಪಕ್ಕದ ಧ್ವಾರದ ರಸ್ತೆಯಲ್ಲಿ ಹುಡುಗಿ ಓರ್ವಳು ನಡೆದುಕೊಂಡು ಬರುತ್ತಿರಬೇಕಾದರೇ ಮಾದಕವ್ಯಸನಿ ಓರ್ವ ಆಕೆಯ ಜತೆ ಅನುಚಿತವಾಗಿ ನಡೆದುಕೊಂಡು ತೊಂದರೆ ಕೊಟ್ಟಿದ್ದಾನೆ. ಈ ವೇಳೆ ಸುತ್ತ ಮುತ್ತ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಭಾಗದಲ್ಲಿ ಇಂತಹ ಕೃತ್ಯಗಳು ಹೆಚ್ಚು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಿವಿಧ ರೀತಿಯಲ್ಲಿ ನಶೆ ಏರಿಸಿಕೊಂಡ ಪುಂಡರು ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ರೇಗಿಸುತ್ತಿದ್ದು, ಈ ಭಾಗದಲ್ಲಿ ಹೆಣ್ಣು ಮಕ್ಕಳು ಓಡಾಡುವುದೇ ಅಸಹ್ಯ ಎನಿಸುವಂತಾಗಿದೆ. ಕೂಡಲೇ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಇಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹೆಚ್‌ ಡಿ ರೇವಣ್ಣ ಜಾಮೀನಿಗೆ ಕಾರಣವಾಗಿದ್ದು ಆ 3 ಅಂಶಗಳು! ಈ ಕಟ್ಟಿನಕೆರೆ ಮಾರುಕಟ್ಟೆ( )ಯಲ್ಲಿ ಇಬ್ಬರೂ ಸೆಕ್ಯೂರಿಟಿ ಇದ್ದರೂ ಇಂತಹ ಸಣ್ಣಪುಟ್ಟ ಕೃತ್ಯಗಳು ನಡೆಯುತ್ತಿವೆ. ಕೀಳು ಮಟ್ಟದ ಜನರಿಂದಾಗಿ ಈ ಭಾಗದಲ್ಲಿರುವ ಅಂಗಡಿಗಳಿಗೆ ಮಹಿಳೆಯರು ಬರಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ನಮ್ಮ ವ್ಯಾಪಾರ ಕೂಡ ಹಾಳಾಗುತ್ತಿದೆ. ಹಾಗಾಗಿ ಪೊಲೀಸ್‌ ಇಲಾಖೆ ಈ ಬಗ್ಗೆ ಗಮನಹರಿಸಿ ಇಲ್ಲಿಗೆ ಪೊಲೀಸ್‌ ಬೀಟ್‌ ನಿಯೋಜಿಸುವಂತೆ ಮನವಿ ಮಾಡಿದರು.