ಸಿಬಿಎಸ್‌ಸಿ 12 ನೇ ತರಗತಿ ಫಲಿತಾಂಶ ಬಿಡುಗಡೆ, ಒಟ್ಟು ಶೇ.87.98 ಫಲಿತಾಂಶ! ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮೇ 13 ರಂದು ಅಂದರೆ ಇಂದು 2024ರ 12 ನೇ ತೆರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ನವದೆಹಲಿ (ಮೇ.13):ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () ಮೇ 13 ರಂದು ಅಂದರೆ ಇಂದು 2024ರ 12 ನೇ ತೆರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಒಟ್ಟು 87.98 ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ .. ಅಥವಾ ... ತಮ್ಮ ಫಲಿತಾಂಶಗಳನ್ನು ವೀಕ್ಷಿಸಿ, ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವರ್ಷ ಸುಮಾರು 26 ವಿವಿಧ ದೇಶಗಳಿಂದ ಒಟ್ಟು 39 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 5.80 ಲಕ್ಷ ವಿದ್ಯಾರ್ಥಿಗಳು 2024 ರ ಬೋರ್ಡ್ ಪರೀಕ್ಷೆಗಳನ್ನು ಬರೆದಿದ್ದರು. ಒಟ್ಟು 877 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿತ್ತು. 12 ನೇ ತರಗತಿ ಪರೀಕ್ಷೆಗಳನ್ನು ಫೆಬ್ರವರಿ 15ರಿಂದ ಮತ್ತು ಏಪ್ರಿಲ್ 2 ರವರೆಗೆ ನಡೆಸಲಾಗಿತ್ತು. 10ನೇ ಕ್ಲಾಸಲ್ಲಿ ಜಸ್ಟ್‌ ಪಾಸಾದರೂ ಬ್ಯಾನರ್‌ ಕಟ್ಟಿ ಸಂಭ್ರಮಾಚರಣೆ..! ಸಿಬಿಎಸ್‌ಇ ಫಲಿತಾಂಶ ಪರಿಶೀಲನೆ ಹೇಗೆ?ಅಧಿಕೃತ ವೆಬ್‌ಸೈಟ್‌ .. ಅಥವಾ ... ಭೇಟಿ ನೀಡಿ.ಮುಖಪುಟದಲ್ಲಿ ಕಾಣಿಸುವ ಪರೀಕ್ಷೆಗಳು/ಬೋರ್ಡ್ ಫಲಿತಾಂಶ 2024 ಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ.ಹೊಸ ವಿಂಡೋ ತೆರೆಯುತ್ತದೆ. ಅಲ್ಲಿ ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಭದ್ರತಾ ಪಿನ್ ಬಳಸಿ ಲಾಗ್ ಇನ್ ಮಾಡಿ. ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಸುಳ್ಳು ದಾಖಲೆ ನೀಡಿ ಪೂರೈಸಿದ ವೈದ್ಯೆಯ ಪದವಿ ಮಾನ್ಯಗೊಳಿಸಿದ ಬಾಂಬೆ ಹೈಕೋರ್ಟ್: ಮಾನ್ಯತೆಗೆ ನೀಡಿದ ಕಾರಣವಿದು ಡಿಜಿಲಾಕರ್ ಮೂಲಕ ಪರಿಶೀಲಿಸುವುದು ಹೇಗೆ?ನಿಮ್ಮ ಡಿಜಿಲಾಕರ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ ಅಥವಾ ಖಾತೆಯನ್ನು ರಚಿಸಿ ಫಲಿತಾಂಶ 2024 ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಫಲಿತಾಂಶ 2024 ಗಾಗಿ ಸಕ್ರಿಯಗೊಂಡ ಲಿಂಕ್ ಅನ್ನು ಆಯ್ಕೆಮಾಡಿನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ ಸ್ಕೋರ್‌ಕಾರ್ಡ್ ಕಾಣಿಸುತ್ತದೆ.