ಹೂವಿನಹಡಗಲಿ: ಕೊಡಲಿಯಿಂದ ಪತ್ನಿಯ ರುಂಡವನ್ನೇ ಕಡಿದ ಪತಿ ಪತಿಯು ಏಕಾಏಕಿ ಮನೆ ಮುಂದೆಯೇ ಹೆಂಡತಿಯ ರುಂಡವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆಂದು ಮೃತಳ ತಾಯಿ ಕುರಿ ಹನುಮಕ್ಕ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ಹೂವಿನಹಡಗಲಿ(ಮೇ.11):ಕೊಡಲಿಯಿಂದ ಪತ್ನಿಯ ರುಂಡ ಕಡಿದು ಕೊಲೆಗೈದ ಘಟನೆ ತಾಲೂಕಿನ ಕೆ.ಅಯ್ಯನ ಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಗ್ರಾಮದ ಅರುಣಾ ಪ್ರದೀಪ (28) ಕೊಲೆಯಾದವಳು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಪ್ರದೀಪ ಅಲಗೂರು ಕೊಲೆ ಆರೋಪಿ ಎಂದು ತಿಳಿದುಬಂದಿದೆ. ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆ ಕೊಂದು ಚಿನ್ನದ ಸರ ಕಸಿದು ಪರಾರಿ ಪ್ರದೀಪ ಹಾಗೂ ಅರುಣಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ-ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಶುಕ್ರವಾರ ಕೂಡ ಬೆಳಿಗ್ಗೆ ಜಗಳ ಆರಂಭವಾಗಿದೆ. ಪತಿಯು ಏಕಾಏಕಿ ಮನೆ ಮುಂದೆಯೇ ಹೆಂಡತಿಯ ರುಂಡವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆಂದು ಮೃತಳ ತಾಯಿ ಕುರಿ ಹನುಮಕ್ಕ ಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ಈ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಸಿಪಿಐ ದೀಪಕ್ ಬೂಸರೆಡ್ಡಿ, ಎಎಸ್‌ಐ ರಾಜೇಂದ್ರ ನಾಯ್ಕ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.