ಕಲಬುರಗಿ: ಕೈಕೊಟ್ಟ ಪ್ರಿಯಕರ, ಡೆತ್‌ ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ ಡೆತ್ ನೋಟ್ ಬರೆದಿಟ್ಟು ಪುಷ್ಪಾ ನೇಣಿಗೆ ಕೊರಳೊಡ್ಡಿದ್ದಾಳೆ. ಯುವತಿ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಳು. ಮೃತ ಪುಷ್ಪಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಕಲಬುರಗಿ(ಮೇ.11):ಪ್ರಿಯಕರ ಕೈಕೊಟ್ಟ ಹಿನ್ನಲೆಯಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರದ ಹೊರವಲಯದ ಯಲ್ಲಾಲಿಂಗ ಕಾಲೋನಿಯಲ್ಲಿ ಇಂದು(ಶನಿವಾರ) ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಡೆತ್ ನೋಟ್ ಬರೆದಿಟ್ಟು ಪುಷ್ಪಾ ನೇಣಿಗೆ ಕೊರಳೊಡ್ಡಿದ್ದಾಳೆ. ಯುವತಿ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಳು. ಮೃತ ಪುಷ್ಪಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ದಾಬಸ್‌ಪೇಟೆ: ಫೋನ್ ಬಳಸಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನ ಜೊತೆ ಪ್ರೀತಿ ಮಾಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಕೆಲ ದಿನಗಳಿಂದ ಪುಷ್ಪಾ ಮದ್ವೆ ಮಾಡಿಕೋ ಎಂದು ಕಿರಣ್‌ಗೆ ಒತ್ತಾಯ ಮಾಡುತ್ತಿದ್ದಳು.ಮನೆಯವರ ಒತ್ತಡದಿಂದ ಕಿರಣ್ ಮದುವೆ ನಿರಾಕರಿಸಿದ್ದಲ್ಲದೇ ಪುಷ್ಪಾಳನ್ನು ಇಗ್ನೋರ್ ಮಾಡುತ್ತಿದ್ದ. ಇದರಿಂದ ಮನನೊಂದು ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.