ಮುಂದಿನ 2 ವಾರ ಬೆಂಗಳೂರಲ್ಲಿ ಗುಡುಗು -ಮಿಂಚು, ನಿಂದ ಸುರಕ್ಷಿತವಾಗಿರುವುದು ಹೇಗೆ? ಬಿಸಿಲಿನಿಂದ 'ಬೆಂದ' ಕಾಳೂರಾಗಿದ್ದ ಬೆಂಗಳೂರಿನಲ್ಲಿ ಮಳೆಯ ಸಿಂಚನವಾಗಿದೆ. ಈ ಮಳೆಯಿಂದ ಬೆಂಗಳೂರು ಮತ್ತೆ ಕೂಲ್ ಆಗಿದೆ. ಬೆಂಗಳೂರಿಗರ ಮಳೆ ಸಂಭ್ರಮದ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ 2 ವಾರದ ಬೆಂಗಳೂರಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗುಡುಗು, ಮಿಂಚಿನಿಂದ ಎಚ್ಚರವಹಿಸಲು ಕೆಲ ಸಲಹೆ ನೀಡಿದೆ. ಬೆಂಗಳೂರು(ಮೇ.03) ಬೆಂಗಳೂರಿನಲ್ಲಿ ಮಳೆರಾಯನ ಆಗಮನದಿಂದ ಜನರು ಖುಷಿಯಾಗಿದ್ದಾರೆ. ಉರಿ ಬಿಸಿಲಿನಲ್ಲಿ ಬೆಂದು ಹೋಗಿದ್ದ ಜನರಿಗೆ ಇದೀಗ ಮಳೆ ತಂಪೆರಿದೆದೆ. ನಗರದ ಬಹುತೇಕ ಕಡೆ ಮಳೆಯಾಗಿದೆ. ತಕ್ಕ ಮಟ್ಟಿಗೆ ಬೆಂಗಳೂರು ತಂಪಾಗಿದೆ. ಒಂದೆಡೆ ಬಿಸಿಲಿನ ಬೇಗೆ, ಮತ್ತೊಂದೆಡೆ ನೀರಿಗೆ ಹಾಹಾಕಾರದಿಂದ ಜನರು ಹೈರಾಣಾಗಿದ್ದರು. ಇದೀಗ ಮಳೆಯ ಸಿಂಚನವಾಗಿದ್ದು ಎಲ್ಲೆಡೆ ಸಂಭ್ರಮ ನೆಲೆಸಿದೆ. ಈ ಸಂಭ್ರಮದ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಮುಂದಿನ 2 ವಾರ ಬೆಂಗಳೂರಲ್ಲಿ ಗುಡುಗು ಅಬ್ಬರಿಸಲಿದೆ ಎಂದಿದೆ. ಬಾರಿ ಗುಡುಗು ಅಪ್ಪಳಿಸುವ ಕಾರಣ ಬೆಂಗಳೂರಿಗರು ಅತೀವ ಎಚ್ಚರವಹಿಸಬೇಕಾಗ ಅವಶ್ಯಕತೆ ಇದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ 2 ವಾರ ಗುಡುಗು ಅಬ್ಬರಿಸುವ ಸಾಧ್ಯತೆಯೆನ್ನು ಹವಾಮಾನ ಇಲಾಖೆ ಸೂಚಿಸಿದೆ. ಗುಡುಗು ಮಿಂಚಿನಿಂದ ಜನಸಾಮಾನ್ಯರು ಎಚ್ಚರಿಕೆಯಿಂದ ಇರಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲ ಮಹತ್ವದ ಸಲಹೆ ನೀಡಿದೆ. ರಾಜ್ಯದ ಹಲವು ಕಡೆ ವರುಣನ ಸಿಂಚನ, ಬೆಂಗಳೂರಿಗರ ಮೊಗದಲ್ಲಿ ಮಂದಹಾಸ ಬೆಂಗಳೂರಿನ ಕಳೆದ 100 ವರ್ಷದ ಇತಿಸಾದಲ್ಲಿ ಏಪ್ರಿಲ್ ತಿಂಗಳು ಮಳೆ ಇಲ್ಲದೆ ಸಾಗಿದ್ದು ಇದೇ ಮೊದಲು. ಆದರೆ ಬೆಂಗಳೂರಿಗರ ಪ್ರಾರ್ಥನೆಯನ್ನು ಮಳೆರಾಯ ಕೇಳಿಸಿಕೊಂಡ. ಕೊನೆಗೂ ಮೇ ತಿಂಗಳ ಆರಂಭದಲ್ಲೇ ಮಳೆ ಶುರುವಾಗಿದೆ. ಮೇ.1ರಂದು ತುಂತುರು ಹನಿ ಮೂಡಿಸಿ ಮರೆಯಾಗಿದ್ದ ಮಳೆರಾಯ, ಮೇ.ರಂದು ನಿಯಮಿತ ಮಳೆ ಮೂಲಕ ಸಿಹಿ ನೀಡಿದ್ದಾನೆ.