ನಿಮ್ಮ ಆಧಾರ್‌ಕಾರ್ಡ್ ಅಪ್ಡೇಡ್ ಆಗಿದ್ಯಾ? ಸೆಪ್ಟೆಂಬರ್ 14 ಕಡೆ ದಿನ ಆಧಾರ್‌ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳು ಸ್ಪಷ್ಟವಾಗಿ ಅಪ್‌ಡೇಟ್‌ ಆಗಿರುವುದ್ನು ಖಚಿತಪಡಿಸಿಕೊಳ್ಳಲು ಯುಐಡಿಎಐ ಸೆಪ್ಟೆಂಬರ್ 14ರವರೆಗೆ ಗಡುವು ನೀಡಿದ್ದು, ಆ ಗಡುವಿನ ಮೊದಲು ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡಬೇಕು ಇಲ್ಲದೇ ಹೋದರೆ ದಂಡ ಪಾವತಿಸಬೇಕಾಗುತ್ತದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಥವಾ ಯುಐಡಿಎಐ ()ಯಾರು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್‌ ಮಾಡಿಸಿಕೊಂಡಿದ್ದಾರೋ ಅವರು ತಮ್ಮ ಆಧಾರ್‌ಕಾರ್ಡನ್ನು ಇದುವರೆಗೆ ಅಪ್‌ಡೇಟ್ ಮಾಡಿಸಿಕೊಳ್ಳದೇ ಇದ್ದರೆ ಸೆಪ್ಟೆಂಬರ್‌ 14ರೊಳಗಾಗಿ ತಮ್ಮ ಆಧಾರ್‌ ಕಾರ್ಡ್‌ನ್ನು ಅಪ್‌ಡೇಟ್‌ ಮಾಡಿಸಿಕೊಳ್ಳಬೇಕು ಎಂದು ಘೋಷಣೆ ಮಾಡಿದೆ. ಆಧಾರ್‌ ಕಾರ್ಡನ್ನು ಅಪ್‌ಡೇಟ್ ಮಾಡಲು ಬಳಕೆದಾರರು ತಮ್ಮ ಐಡಿ ಕಾರ್ಡ್‌ (ಗುರುತು ಖಚಿತಪಡಿಸುವ ಕಾರ್ಡ್‌, ವೋಟರ್‌ ಐಡಿ ರೇಷನ್ ಕಾರ್ಡ್ ಇತ್ಯಾದಿ) ಹಾಗೂ ವಿಳಾಸದ ಮಾಹಿತಿ ನೀಡುವ ದಾಖಲೆಯನ್ನು ನೀಡಿ ಈ ಆಧಾರ್‌ ಕಾರ್ಡನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಆಧಾರ್‌ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳು ಸ್ಪಷ್ಟವಾಗಿ ಅಪ್‌ಡೇಟ್‌ ಆಗಿರುವುದ್ನು ಖಚಿತಪಡಿಸಿಕೊಳ್ಳಲು ಯುಐಡಿಎಐ ಸೆಪ್ಟೆಂಬರ್ 14ರವರೆಗೆ ಗಡುವು ನೀಡಿದ್ದು, ಆ ಗಡುವಿನ ಮೊದಲು ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡಬೇಕು ಇಲ್ಲದೇ ಹೋದರೆ ನಂತರ ನಿಮ್ಮ ಆಧಾರ್‌ ಕಾರ್ಡ್‌ನಲ್ಲ ಯಾವುದೇ ಬದಲಾವಣೆ ಮಾಡಬೇಕಾದರೂ ನೀವು 50 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ಯುಐಡಿಎಐನ ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿ () ವ್ಯಕ್ತಿಗಳ ಜನಸಂಖ್ಯೆಯ ಪ್ರಕಾರ () ಮತ್ತು ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸುವುದರಿಂದ ಆಧಾರ್ ದೃಢೀಕರಣವು ಅತ್ಯಗತ್ಯವಾಗಿರುತ್ತದೆ. ನಕಲಿ ಬಳಕೆದಾರರ ಪತ್ತೆಗೆ ಎಲ್‌ಪಿಜಿಗೂ ಆಧಾರ್‌ ಜೋಡಣೆ ಹಾಗಾದರೆ ನಿಮ್ಮ ಆಧಾರ್‌ ಕಾರ್ಡ್ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡೋದು ಹೇಗೆ ? ನಿಮ್ಮ ಆಧಾರ್‌ ಕಾರ್ಡ್‌ ನ್ನು ಆನ್‌ಲೈನ್‌ನಲ್ಲೇ ಅಪ್‌ಟೇಟ್ ಮಾಡೋವುದಕ್ಕೆ ಇಲ್ಲಿದೆ ಹಂತ ಹಂತವಾಗಿ ಮಾಹಿತಿ, ನೀವು ನಿಮ್ಮ ಆಧಾರ್ ಕಾರ್ಡನ್ನು ಅಪ್‌ಡೇಟ್ ಮಾಡದೇ ಇದ್ರೆ ಏನಾಗುತ್ತೆ?ಸೆಪ್ಟೆಂಬರ್ 14ರೊಳಗೆ ನೀವು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಲ್ಲ ಅಂದ್ರೆ ಮುಂದೆ ಮಾಡುವ ಯಾವುದೇ ಅಪ್‌ಡೇಟ್‌ಗೆ ನೀವು 50 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆಧಾ‌ರ್ ಪ್ರಾಬ್ಲಂ: 1 ಲಕ್ಷ ಎಸ್ಸಿ ಸ್ಕಾಲರ್‌ಶಿಪ್‌ ಅರ್ಜಿ ಬಾಕಿ..! ಅಪ್‌ಡೇಟ್ ಮಾಡ್ದೇ ಇದ್ರೆ ಆಧಾರ್ ಕಾರ್ಡ್ ಅನರ್ಹವಾಗುತ್ತ? ಯುಐಡಿಎಐ ನೀಡಿದ ಗಡುವಿನ ಒಳಗೆ ಅಪ್‌ಡೇಟ್ ಮಾಡದೇ ಹೋದ್ರೆ ನಿಮ್ಮ ಆಧಾರ್‌ ಕಾರ್ಡ್‌ ಅಮಾನ್ಯವಾಗುತ್ತಾ? ಖಂಡಿತ ಇಲ್ಲ, ಇಂತಹ ಹೇಳಿಕೆಗಳಲ್ಲಿ ಯಾವುದೇ ಸತ್ಯ ಇಲ್ಲ, ನಿಮ್ಮ ಆಧಾರ್‌ಕಾರ್ಡ್ 10 ವರ್ಷ ಹಳೆಯದಾದರು ಅದು ಕೆಲಸ ಮಾಡುತ್ತದೆ. ಅದು ತನ್ನ ಮೌಲ್ಯ ಕಳೆದುಕೊಳ್ಳುವುದಿಲ್ಲ, ಅವುಗಳನ್ನು ನೀವು ಐಡೆಂಟಿಟಿ ಆಗಿ ಬಳಸಬಹುದು. ಆದರೆ ಉಚಿತವಾಗಿ ನವೀಕರಣ ಮಾಡುವ ಗಡುವು ಮಾತ್ರ ಈಗ ಮುಗಿದಿದೆ.