ಬಾಲಿವುಡ್​ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣು? ಮಗಳ ರಹಸ್ಯ ಪೋಸ್ಟ್​ ಬೆನ್ನಲ್ಲೇ ಘಟನೆ! ಬಾಲಿವುಡ್​ ನಟಿ- ಮಾಡೆಲ್ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ಮಲೈಕಾ ನಿನ್ನೆಯಷ್ಟೇ ರಹಸ್ಯ ಪೋಸ್ಟ್​ ಹಂಚಿಕೊಂಡಿದ್ದು, ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಬಾಲಿವುಡ್​ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಎಎನ್​ಐ ಸುದ್ದಿ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ. ಅನಿಲ್​ ಅರೋರಾ ಅವರು ಟೆರೇಸ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನಷ್ಟೇ ಸಂಪೂರ್ಣ ವಿವರ ಹೊರಬರಬೇಕಿದೆ. ಸದ್ಯ ಪೊಲೀಸ್​ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ.ಮಲೈಕಾ ಮತ್ತು ಅವರ ದಶಕಗಳ ಲಿವ್​ ಇನ್​ ಪಾರ್ಟನಲ್​ ಅರ್ಜುನ್​ ಕಪೂರ್​ ಸಂಬಂಧ ಕೊನೆಗೊಳಿಸಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇಂಥದ್ದೊಂದು ಶಾಕಿಂಗ್​ ನ್ಯೂಸ್​ ಬಂದಿದೆ. ನಿನ್ನೆಯಷ್ಟೇ ಮಲೈಕಾ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಹಸ್ಯ ಸಂದೇಶವೊಂದನ್ನು ಶೇರ್​ ಮಾಡಿಕೊಂಡಿದ್ದರು. ಇದು ಅವರ ಬ್ರೇಕಪ್ ಬಗೆಗಿನ ಸುದ್ದಿಗಳಿಗೆ ಪುಷ್ಟಿಕೊಡುವಂತಿದೆ. ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವ ಮತ್ತು ನಿಮ್ಮ ದುಃಖಕ್ಕಾಗಿ ದುಃಖಿಸುವ ಜನರನ್ನು ಯಾವಾಗಲೂ ಗಮನಿಸಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಕ್ಕೆ ಅರ್ಹರು ಎಂದು ಈ ಪೋಸ್ಟ್​ನಲ್ಲಿ ನಟಿ ಹೇಳಿದ್ದಾರೆ. ಇದರ ಮಧ್ಯೆಯೇ ಶಾಕಿಂಗ್​ ನ್ಯೂಸ್​ ಬಂದಿದ್ದು, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಅಚಾನಕ್​ ಆಗಿ ನಡೆದ ಘಟನೆಯೋ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಬೇಕಿದೆ. ಘಟನೆ ಬಗ್ಗೆ ತಿಳಿಯುತ್ತಲೇ ಮಲೈಕಾ ಅವರ ಮೊದಲ ಪತಿ ಅರ್ಬಾಜ್​ ಖಾನ್​ ಮಲೈಕಾ ಮನೆಗೆ ಧಾವಿಸಿದ್ದಾರೆ. ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ! 1,2,3... ಯಾರ ಜೊತೆ ಕೇಳ್ತಿದ್ದಾರೆ ನೆಟ್ಟಿಗರು! ಮಲೈಕಾ ಅರೋರಾ 11 ವರ್ಷ ವಯಸ್ಸಿನವನಾಗಿದ್ದಾಗ ಆಕೆಯ ಅಪ್ಪ-ಅಮ್ಮ ಬೇರ್ಪಟ್ಟಿದ್ದಾರೆ. ಅವರು ಮತ್ತು ಆ ಸಮಯದಲ್ಲಿ 6 ವರ್ಷ ವಯಸ್ಸಿನ ಸಹೋದರಿ ಅಮೃತಾ ರಾವ್ ಅವರನ್ನು ಅವರ ತಾಯಿ ಜೋಯ್ಸ್ ಪಾಲಿಕಾರ್ಪ್ ಬೆಳೆಸಿದ್ದಾರೆ. ಈ ಕುರಿತು ಹಿಂದೊಮ್ಮೆ ಮಾತನಾಡಿದ್ದ ನಟಿ, ನನ್ನ ಹೆತ್ತವರು ಪ್ರತ್ಯೇಕವಾದ ಕಾರಣ, ನನ್ನ ಅಮ್ಮನನ್ನು ಹೊಸ ವಿಧದಲ್ಲಿ ತಿಳಿಯುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಿದ್ದರು. ತಾಯಿಯಿಂದ ಪ್ರತ್ಯೇಕಗೊಂಡ ಬಳಿಕವೂ ಮಗಳ ವಿಷಯದಲ್ಲಿ ಅನಿಲ್​ ಅವರು ಸದಾ ಸಪೋರ್ಟಿವ್​ ಆಗಿದ್ದರು. ಮಲೈಕಾ ತಮ್ಮ ಮೊದಲ ಪತಿ ಅರ್ಬಾಜ್​ ಖಾನ್​ ಅವರಿಂದ ಡಿವೋರ್ಸ್​ ಪಡೆದ ಬಳಿಕ, ತಮಗಿಂತ ಚಿಕ್ಕವರಾಗಿರುವ ಅರ್ಜುನ್ ಕಪೂರ್​ ಜೊತೆ ದಶಕದಿಂದ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರೂ, ಅದನ್ನು ಕೂಡ ಅವರು ಬೆಂಬಲಿಸಿದ್ದರು ಎನ್ನಲಾಗಿದೆ. ಅಷ್ಟಕ್ಕೂ ಅರ್ಜುನ್​ ಕಪೂರ್​ ಮತ್ತು ಮಲೈಕಾ ನಡುವೆ ಬಿರುಕು ಬಿಟ್ಟಿದೆ ಎಂಬ ಸುದ್ದಿ ಕಳೆದೊಂದು ವರ್ಷದಿಂದ ಬಿ-ಟೌನ್​ನಲ್ಲಿ ಸದ್ದು ಮಾಡುತ್ತಲೇ ಇದೆ. ಈ ರೀತಿ ಸುದ್ದಿಯಾದಾಗಲೆಲ್ಲಾ ಈ ಜೋಡಿ ಒಟ್ಟಿಗೇ ಕಾಣಿಸಿಕೊಂಡು ಎಲ್ಲರ ಬಾಯಿ ಮುಚ್ಚಿಸುತ್ತಿತ್ತು. ಆದರೆ ನಿನ್ನೆ ಮಲೈಕಾ ಶೇರ್​ ಮಾಡಿರುವ ಪೋಸ್ಟ್​ನಿಂದ ತಮ್ಮ ಸುದೀರ್ಘ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ ತಂದೆ ಅವರು ಅನಿಲ್ ಅವರ ಆತ್ಮಹತ್ಯೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. (@) ಕೆಲ ದಿನಗಳ ಹಿಂದೆ ಮಲೈಕಾ, ತಾನು ಸಾಯುವವರೆಗೂ ಪ್ರೀತಿಗಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇವರು ಹೀಗೆ ಯಾಕೆ ಹೇಳುತ್ತಿದ್ದಾರೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದ್ರೆ ಬ್ರೇಕಪ್​ ಆಯ್ತಾ ಅಥ್ವಾ ಅರ್ಜುನ್​ ಕಪೂರ್​ನನ್ನು ಇನ್ನೂ ಪ್ರೀತಿಸ್ತಾ ಇದ್ದಾರೋ ಅಥ್ವಾ ಬೇರೊಬ್ಬನ ಎಂಟ್ರಿ ಆಯ್ತಾ ಎಂಬೆಲ್ಲಾ ಗೊಂದಲ ಅಭಿಮಾನಿಗಳನ್ನು ಕಾಡುತ್ತಿದೆ. ಮೊನ್ನೆಯಷ್ಟೇ, ತಮ್ಮ ಬಾಯ್​ಫ್ರೆಂಡ್​ ಅರ್ಜುನ್​ ಕಪೂರ್​ ಅವರ ಹುಟ್ಟುಹಬ್ಬವನ್ನೇ ಮರೆತು ನಂತರ ತೇಪೆ ಹಚ್ಚುವ ಕೆಲಸ ಮಾಡಿ ಮಲೈಕಾ ಟ್ರೋಲ್​ಗೆ ಒಳಗಾಗಿದ್ದರು. ಬ್ರೇಕಪ್​ ಸುದ್ದಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಬಾಯ್​ಫ್ರೆಂಡ್​ ಹುಟ್ಟುಹಬ್ಬ ಮಿಸ್​ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಮೊನ್ನೆ ಅಂದರೆ ಜೂನ್​ 26ರಂದು ಅರ್ಜುನ್​ ಕಪೂರ್​ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 50 ವರ್ಷದ ಮಲೈಕಾ ಅದನ್ನು ಮರೆತಿದ್ದರು. ಆಮೇಲೆ ಈ ರೀತಿ ಪೋಸ್ಟ್​ ಹಾಕಿದ್ದರು. ಆದರೆ ಈಗ ತಂದೆಯ ಸಾವಿನ ಹಿನ್ನೆಲೆಯಲ್ಲಿ, ಒಂದೊಂದೇ ವಿಷಯಗಳು ಮುನ್ನೆಲೆಗೆ ಬರುತ್ತಿವೆ. (@)