ಹಬ್ಬದ ಸ್ಪೆಷಲ್ ಆಫರ್: ಜಿಯೋ ಬಳಿಕ ಏರ್‌ಟೆಲ್ ಶುರು ಮಾಡಿದೆ ಪ್ಲಾನ್... ಎಕ್ಸಟ್ರಾ ಡೇಟಾ ಜೊತೆ ಬಂಪರ್ ಗಿಫ್ಟ್ ಏರ್‌ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಹೊಸ ಹಬ್ಬದ ಆಫರ್‌ಗಳನ್ನು ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 6 ರಿಂದ 11 ರವರೆಗೆ, 979 ರೂ., 1,029 ರೂ. ಮತ್ತು 3,599 ರೂ.ಗಳ ಯೋಜನೆಗಳಲ್ಲಿ ಹೆಚ್ಚುವರಿ ಡೇಟಾ, ಕರೆ ಮತ್ತು ಓಟಿಟಿ ಸಬ್‌ಸ್ಕ್ರಿಪ್ಷನ್‌ಗಳಂತಹ ಪ್ರಯೋಜನಗಳನ್ನು ಪಡೆಯಿರಿ. ನವದೆಹಲಿ:ಭಾರತೀಯ ಏರ್‌ಟೆಲ್‌ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಹೊಸ ಆಫರ್ ಗಳನ್ನು ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಆಫರ್ ಪರಿಚಯಿಸುವ ಮೂಲಕ ಎದುರಾಳಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ಕೊಡಲು ಪ್ರಯತ್ನಿಸುತ್ತಿದೆ. ಏರ್‌ಟೆಲ್ 6ನೇ ಸೆಪ್ಟೆಂಬರ್‌ನಿಂದ 11ನೇ ಸೆಪ್ಟೆಂಬರ್ 2024ರವರೆಗೆ ಲಿಮಿಟೆಡ್ ಟೈಮ್ ಫಸ್ಟಿವ್ ಆಫರ್ ನೀಡುತ್ತಿದೆ. ಕಂಪನಿಯ ಮೂರು ಜನಪ್ರಿಯ ಪ್ಲಾನ್‌ನಲ್ಲಿ ಹೆಚ್ಚುವರಿ ಬೆನೆಫಿಟ್‌ಗಳು ಗ್ರಾಹಕರಿಗೆ ನೀಡುತ್ತಿದೆ. ಸೆಪ್ಟೆಂಬರ್ 6ರಿಂದ 11ರೊಳಗೆ ರೀಚಾರ್ಜ್ ಮಾಡಿಸಿಕೊಳ್ಳುತ್ತಿದ್ದರೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಡಿ ನಿಮಗೆ ಎಕ್ಸಟ್ರಾ ಡೇಟಾ, ವಾಯ್ಸ್ ಕಾಲ್ ಜೊತೆ ಓಟಿಟಿ ಬೆನೆಫಿಟ್‌ಗಳು ಸಿಗಲಿವೆ. : , benefits1.ಈ ಹಬ್ಬದ ಆಫರ್‌ಗಳಲ್ಲಿ ಮೊದಲನೇಯದ್ದು, 979 ರೂಪಾಯಿಯ ಪ್ಲಾನ್. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ, ಅನ್‌ಲಿಮಿಟೆಡ್ ಕಾಲ್, ಏರ್‌ಟೆಲ್‌ನ ‍ ಪ್ರೀಮಿಯಂ ಸರ್ವಿಸ್ ಮೂಲಕ 22ಕ್ಕೂ ಅಧಿಕ ಪ್ಲಾಟ್‌ಫಾರಂನ ಆಕ್ಸೆಸ್ ಸಿಗಲಿದೆ. ಈ ಪ್ಲಾನ್ 84 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ 10GB ಡೇಟಾ ಸಿಗುತ್ತದೆ. ಈ ಹೆಚ್ಚುವರಿ ಡೇಟಾ ಬಳಕೆಗೆ 28 ದಿನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸರ್ಕಾರದಿಂದ BSNLಗೆ ₹6 ಸಾವಿರ ಕೋಟಿ, ಇನ್ಮುಂದೆ 365 ದಿನ ವ್ಯಾಲಿಡಿಟಿಗೆ ಕೇವಲ ಇಷ್ಟೇ ಕೊಡೋದು! 2.ಏರ್‌ಟೆಲ್‌ ಮತ್ತೊಂದು ಆಫರ್ ಅದು 1,029 ರೂಪಾಯಿಗೆ ಲಭ್ಯವಿದೆ. ಎಂಟರ್‌ಟೈನ್ಮೆಂಟ್ ಪ್ರಿಯರಿಗೆ ಈ ಯೋಜನೆಯ ಒಳ್ಳೆಯ ಆಯ್ಕೆಯಾಗಿದೆ. ಈ ಯೋಜನೆಯಡಿ ಏರ್‌ಟೆಲ್ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಜೊತೆಯಲ್ಲಿ ಅನ್‌ಲಿಮಿಟೆಡ್ ಕಾಲ್ ಮತ್ತು + ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. ಇದು ಸಹ 84 ದಿನದ ವ್ಯಾಲಿಡಿಟಿಯ ಪ್ಲಾನ್ ಹೊಂದಿದೆ. ಫೆಸ್ಟಿವ್ ಆಫರ್ ಅಡಿಯಲ್ಲಿ Premiumನಲ್ಲಿ 22 ಪ್ಲಾಟ್‌ಫಾರಂ ಸಬ್‌ಸ್ಕ್ರಿಪ್ಷನ್ ಸಿಗಲಿದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಬಳಕೆದಾರರಿಗೆ 10GBಯ ಎಕ್ಸಟ್ರಾ ಕೂಪನ್ ಲಭ್ಯವಾಗುತ್ತದೆ. 3.ದೀರ್ಘವಾಧಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ವರ್ಗದ ಬಳಕೆದಾರರಿಗೂ ಏರ್‌ಟೆಲ್ ಫೆಸ್ಟಿವಲ್ ಆಫರ್ ನೀಡುತ್ತಿದೆ. ಲಾಂಗ್ ಪೀರಿಯಡ್ ಗಾಗಿ ನೀವು 3,599 ರೂಪಾಯಿಯ ರೀಚಾರ್ಜ್ ಮಾಡಿಕೊಳ್ಳಬಹುದು. ಪ್ರತಿದಿನ 2GB ಡೇಟಾ ಜೊತೆಯಲ್ಲಿ ಅನ್‌ಲಿಮಿಟೆಡ್ ಕಾಲ್, ಒಂದು ವರ್ಷದವರೆಗೆ Premiumನಲ್ಲಿ 22 ಪ್ಲಾಟ್‌ಫಾರಂ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ. 28 ದಿನದ ವ್ಯಾಲಿಡಿಟಿ ಅಡಿಯಲ್ಲಿ 10GB ಸಿಗಲಿದೆ. ದಿನದ ಡೇಟಾ ಲಿಮಿಟ್ ಖಾಲಿಯಾಗಿ ಪರಿತಪಿಸೋ ಬಳಕೆದಾರರಿಗೆ ಈ ಯೋಜನೆ ಬೆಸ್ಟ್ ಆಯ್ಕೆಯಾಗಿದೆ. ನೋಡಿ Portಗೆ ಮುಂದಾದ - ಗ್ರಾಹಕರು: 45 ದಿನದವರೆಗೆ ಪ್ರತಿದಿನ ಸಿಗುತ್ತೆ 2GB ಡೇಟಾ!