ಜೈಲಲ್ಲಿರೋ ದರ್ಶನ್‌ಗೆ ರಾಜಾತಿಥ್ಯ ಕೊಡೋ ವಿಲ್ಸನ್ ಗಾರ್ಡನ್ ನಾಗ ಯಾರು? ಈತನ ಕ್ರೈಂ ಹಿಸ್ಟರಿ ಗೊತ್ತಾ.! ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ರೌಡಿ ವಿಲ್ಸನ್ ಗಾರ್ಡನ್ ನಾಗನ ಹಿನ್ನೆಲೆ ಗೊತ್ತಾ.? ಇಲ್ಲಿದೆ ಆತನ ಕ್ರೈಂ ಹಿಸ್ಟರಿ... ಬೆಂಗಳೂರು (ಆ.25):ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿರುವ ನಟ ದರ್ಶನ್ ನರಕ ಅನುಭವಿಸುತ್ತಿದ್ದಾನೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಕೊಲೆ ಆರೋಪಿ ದರ್ಶನ್‌ಗೆ ಭರ್ಜರಿ ರಾಜಾತಿಥ್ಯವನ್ನು ನೀಡಿದ್ದಾನೆ. ನಾವು, ನೀವೆಲ್ಲರೂ ಜೈಲು ಎನ್ನುವುದನ್ನು ನರಕ ಎಂದು ಕೇಳಿರುತ್ತೇವೆ, ಬದಲಿಯಾಗಿ ಸಿನಿಮಾದಲ್ಲಿ ನೋಡಿದ್ದೇವೆ. ಆದರೆ, ಬೆಂಗಳೂರಿನ ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ಅನುಭವಿಸುತ್ತಿರುವ ರಾಜಾತಿಥ್ಯವನ್ನು ನೋಡಿದರೆ, ಜೈಲಿನ ಬಗ್ಗೆ ಇರುವ ಕಲ್ಪನೆಯೇ ಸುಳ್ಳು ಎಂಬುದು ಗೊತ್ತಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಂಗಳೂರನ್ನೇ ನಡುಗಿಸಿದ 8 ಕೊಲೆ ಕೇಸುಗಳ ಎ1 ಆರೋಪಿ ಜೊತೆಗೆ ನಟ ದರ್ಶನ್ ನಗಾಡುತ್ತಾ ಧಮ್ ಮಾರೋ ಧಮ್... ಎಂದು ಮಜಾ ಮಾಡುತ್ತಿದ್ದಾನೆ. ಬೆಂಗಳೂರಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಕಳೆದ 20 ವರ್ಷಗಳಿಂದ ಕೊಲೆ, ಸುಲಿಗೆ, ಆಫ್ ಮರ್ಡರ್, ಬೆದರಿಕೆ ಸೇರಿದಂತೆ ಹಲವು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಬಹುಪಾಲು ದಿನಗಳನ್ನು ಕಳೆದಿದ್ದಾನೆ. ಇನ್ನು ಬೆಂಗಳೂರಿನ ಸೆಂಟ್ರಲ್ ಜೈಲು ರೌಡಿ ನಾಗನಿಗೆ ಮಾವನ ಮನೆಯಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ವಿಲ್ಸನ್ ಗಾರ್ಡನ್ ನಾಗ ತಾಜಾ ಉದಾಹರಣೆ ಆಗಿದ್ದಾನೆ. ಜೈಲಿನಲ್ಲಿದ್ದುಕೊಂಡೇ ತನ್ನ ಶಿಷ್ಯರನ್ನು ಬಿಟ್ಟು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿಸುತ್ತಿದ್ದಾನೆ ಎಂಬ ಮಾಹಿತಿಯಿದೆ. ಇಂತಹ ನಟೋರಿಯಸ್ ರೌಡಿಯ ಜೊತೆಗೆ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಭರ್ಜರಿಯಾಗಿ ಮಜಾ ಮಾಡುತ್ತಿದ್ದಾನೆ. ನಟೋರಿಯಸ್‌ ರೌಡಿ ಜತೆ ವಿಗ್‌ ಇಲ್ಲದ ದರ್ಶನ್‌ ಜೈಲಲ್ಲಿ ಧಮ್ ಹೊಡೆಯೋ ಫೋಟೋ ಲೀಕ್‌ ಆಗಿದ್ದೇಗೆ? ಇಲ್ಲಿದೆ ನೋಡಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ ಕ್ರೈಂ ಹಿಸ್ಟರಿ: ರೌಡಿ ವಿಲ್ಸನ್‌ ಗಾರ್ಡನ್ ನಾಗನ ಜತೆ ಜೈಲಲ್ಲಿ ದರ್ಶನ್‌ ಸಿಗರೇಟ್‌ ಸೇದುವ ಫೋಟೋ ವೈರಲ್! ಒಟ್ಟಾರೆ ವಿಲ್ಸನ್ ಗಾರ್ಡನ್ ನಾಗನ ಹೆಸರಿನಲ್ಲಿ 23 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 8 ಕೊಲೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಎ1 ಆರೋಪಿಯಾಗಿದ್ದಾನೆ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲು ಸೇರಿದ ನಟ ದರ್ಶನ್ ಕೂಡ ನಾಗನೊಂದೊಗೆ ಸೇರಿಕೊಂಡು ಮಜಾ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಸಮಾಜ ತಿದ್ದುವ, ಪೊಲೀಸರ ವೇಶದಲ್ಲಿ ಸಮಾಜ ಕಾಯುವ, ಯೋಧರ ವೇಶದಲ್ಲಿ ದೇಶ ಕಾಯುವ ಪಾತ್ರಗಳನ್ನು ಮಾಡಿದ ದರ್ಶನ್‌ಗೆ ನೈತಿಕತೆ, ಆತ್ಮಸಾಕ್ಷಿ ಇದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.